7.52 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ

2ark-4
ಅರಕಲಗೂಡು ನ್ಯಾಯಾಲಯ ಆವರಣದಲ್ಲಿ 7.52 ಲಕ್ಷ ರೂ ವೆಚ್ಚದಲ್ಲಿ 85 ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಹೂವಣ್ಣ, ಅಲೀಂ, ಕೃಷ್ಣಯ್ಯ ಇತರರಿದ್ದರು.
Published on

ಅರಕಲಗೂಡು: ಪಟ್ಟಣದ ನ್ಯಾಯಾಲಯ ಆವರಣದಲ್ಲಿ 7.52 ಲಕ್ಷ ರೂ., ವೆಚ್ಚದ 85 ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ನ್ಯಾಯಾಧೀಶರು, ವಕೀಲರು, ಸಾರ್ವಜನಿಕರು ತಿರುಗಾಡುವ ರಸ್ತೆ ಸಂಪೂರ್ಣ ಹಾಳಾಗಿತ್ತು. ಇದಕ್ಕಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣದಲ್ಲೂ ಸಾಕಷ್ಟು ಕಾಮಗಾರಿ ನಡೆಯಬೇಕಿದ್ದು, ಸದಸ್ಯರು, ಪಟ್ಟಣ ಪಂಚಾಯತಿ ಅಧಿಕಾರಿಗಳು ಒಟ್ಟಾಗಿ ಸೇರಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಪ.ಪಂ. ಮಾಜಿ ಅಧ್ಯಕ್ಷ ಹೂವಣ್ಣ, ಸದಸ್ಯರಾದ ಪ್ರದೀಪ್, ಕೃಷ್ಣಯ್ಯ, ಸುಬಾನ ಷರೀಫ್, ಮುಖ್ಯಾಧಿಕಾರಿ ಶಿವಕುಮಾರ್, ಮುಖಂಡರಾದ ಅಲೀಂ, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net