7.5 ಲಕ್ಷ ರೂ. ವೆಚ್ಚದಲ್ಲಿ ಫುಟ್‌ಪಾತ್ ಅಭಿವೃದ್ಧಿ

01Kush01
Published on

ಕುಶಾಲನಗರ: ಕುಶಾಲನಗರ ಪುರಸಭೆ ವತಿಯಿಂದ ಕುಶಾಲನಗರದ 10ನೇ ವಾರ್ಡ್ ಮತ್ತು 5ನೇ ವಾರ್ಡ್ ವ್ಯಾಪ್ತಿಯ ಬಿ.ಎಂ.ರಸ್ತೆಯ ಎರಡು ಬದಿಗೆ ಒಟ್ಟು 7.5 ಲಕ್ಷ ರೂ. ವೆಚ್ಚದ 200 ಚದರ ಮೀಟರ್ ಇಂಟರ್‌ಲಾಕ್ ಟೈಲ್ಸ್ ಹಾಕಿಸುವ ಮೂಲಕ ಫುಟ್‌ಪಾತ್ ಅಭಿವೃದ್ಧಿ ಪಡಿಸಲಾಗುತ್ತಿದೆ.


ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಗ್ರಾನೈಟ್ ಮತ್ತು ಎಸ್‌ಎಸ್ ರೇಲಿಂಗ್ಸ್ ಹಾಕಿಸುವ ಮೂಲಕ ಪಟ್ಟಣದ ಅಂದ ಹೆಚ್ಚಿಸಲು ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್ ಮತ್ತು ಅಧ್ಯಕ್ಷ ಬಿ.ಜಯವರ್ಧನ ಮುಂದಾಗಿದ್ದಾರೆ. ಫುಟ್‌ಪಾತ್‌ಗೆ ಗುಣಮಟ್ಟದ ಇಂಟರ್‌ಲಾಕ್ ಟೈಲ್ಸ್ ಹಾಕಿಸುತ್ತಿರುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.


ಬಿ.ಎಂ.ರಸ್ತೆಯ ರೋಟರಿ ಕ್ಲಬ್ ಸಭಾಂಗಣದ ಮುಂಭಾಗ ವಾಹನ ನಿಲುಗಡೆಗೆ ಸಮಸ್ಯೆಯಿತ್ತು. ಆ ಸಮಸ್ಯೆ ನೀಗಿಸಲು ಬಣ್ಣ ಬಣ್ಣದ ಇಂಟರ್‌ಲಾಕ್ ಟೈಲ್ ಹಾಕಿಸಿ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.


ಗುತ್ತಿಗೆದಾರ ಮುಜೀಬ್ ಅವರಿಗೆ ಸದಸ್ಯ ಆನಂದಕುಮಾರ್ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿ, ಸ್ಥಳದಲ್ಲೇ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net