

ಅಥಣಿ ಗ್ರಾಮೀಣ: ರೈತರು, ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಂಘ ಪ್ರಗತಿಯತ್ತ ಸಾಗುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹನುಮಾನ ದೇವಸ್ಥಾನದ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘ ಕಡಿಮೆ ದರದಲ್ಲಿ ರೈತರಿಗೆ ಬೀಜ, ಗೊಬ್ಬರ ಹಾಗೂ ಔಷಧ ವಿತರಿಸಬೇಕು ಎಂದರು.
ಸಂಘದ ಅಧ್ಯಕ್ಷ ಅಣ್ಣಪ್ಪ ಖೋತ ಮಾತನಾಡಿ, ಸಂಘ 21 ಲಕ್ಷ ರೂ. ನಿವ್ವಳ ಲಾಭ ಹೊಂದಿದ್ದು, ಸದಸ್ಯರಿಗೆ ಶೇ.7.25 ಲಾಭಾಂಶ ವಿತರಿಸಲಾಗುವುದು ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಸಂಜೀವ ಮುದಕಣ್ಣವರ ಮಾತನಾಡಿ, ಸಂಘವು 1,769 ಸದಸ್ಯರನ್ನು ಹೊಂದಿದ್ದು, 1.10 ಕೋಟಿ ರೂ. ಷೇರು ಬಂಡವಾಳ, 22.62 ಕೋಟಿ ರೂ. ಠೇವಣಿ, 11.94 ಕೋಟಿ ರೂ. ದುಡಿಯುವ ಬಂಡವಾಳ, 16.74 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ ಎಂದರು.
ಮುಖಂಡ ಸುಭಾಷ ಸೋನಕರ ಮಾತನಾಡಿದರು. ಉಪಾಧ್ಯಕ್ಷ ಸಂಗಪ್ಪ ಅಡಹಳ್ಳಿ, ಸದಸ್ಯರಾದ ಸುರೇಶ ಪಾಟಣಕರ, ವೀರೇಂದ್ರ ಹಳಕಿ, ಭರಮಾ ಬಣಜ, ಈಶ್ವರ ಜಗದಾಳ, ಸಂಜು ಜಾಧವ, ಸುಮಿತ್ ಪತ್ತಾರ, ಶಿವಲಿಂಗ ಧಡಕೆ, ರಾಮು ಕರೆಣ್ಣವರ, ಸಾಂಯವ್ವ ಸವದಿ, ವಿಠ್ಠಲ ಕುಮಟಗಿ, ಮುಖಂಡರಾದ ವಿಶಾಲ ದೇಸಾಯಿ, ಮುತ್ತಪ್ಪ ಕಾಡದೇವರಮಠ, ಮಾನಸಿಂಗ ಮಗರ, ರಾಜು ಪಾಟೀಲ, ಸೋಮೇಶ ಜ್ಯೋಶಿ, ಸದಾಶಿವ ಹೂಟಿ, ಕಾಡಪ್ಪ ಕಾಳಾಪಾಟೀಲ ನಿರೂಪಿಸಿದರು. ಸಂತೋಷ ಮಾಳಿ ವಂದಿಸಿದರು.