6ರಂದು ಸದ್ಭಾವನಾ ಪಾದಯಾತ್ರೆ

31 kurugodu 01
Published on

ಕುರುಗೋಡು: ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಪ್ರತಿ ಮನೆ ಮನೆಗೆ ತೆರಳಿ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ’ ಸದ್ಭಾವನಾ ಪಾದಯಾತ್ರೆಯನ್ನು ಆ.6 ರಿಂದ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ಮಠದ ಶ್ರೀ ನಿರಂಜನ ಪ್ರಭು ಸ್ವಾಮೀಜಿ ಕರೆ ನೀಡಿದರು.

ಪಟ್ಟಣದಲ್ಲಿರುವ ಶಾಖಾ ಮಠದಲ್ಲಿ ಮಠದಲ್ಲಿ ಸದ್ಭಾವನಾ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಅದಕ್ಕಾಗಿ ಮಕ್ಕಳಿಗೆ ಫೋನ್ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಗುರುಹಿರಿಯರಿಗೆ ಗೌರವ ನೀಡುವ ಜತೆಗೆ ಸನ್ನಡತೆ ಕಲಿಸಿದರೆ ಮಕ್ಕಳು ಉತ್ತಮ ಮಾರ್ಗದಲ್ಲಿ ಬೆಳೆಯುತ್ತಾರೆ. ಆರೋಗ್ಯಯುತ ಚಿಂತನೆ ಬಿತ್ತುವ ಉದ್ದೇಶದಿಂದ ಪಟ್ಟಣದ 23 ವಾರ್ಡ್‌ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಮುಖರಾದ ಕೆ.ಎಂ.ಉಮಾಪತಿಗೌಡ, ಎನ್.ಮರೇಗೌಡ, ಸದಾಶಿವಸ್ವಾಮಿ, ಕೆ.ಗಾದಿಲಿಂಗಪ್ಪ, ಮಂಜುನಾಥಶೆಟ್ಟಿ, ಬಸವರಾಜ, ತೆಂಗಿಮಲ್ಲೇಶಪ್ಪ, ವೀರೇಶಪ್ಪಗೌಡ, ಗವಿಸಿದ್ದಪ್ಪ, ಯಲ್ಲಾಪುರ ಪಂಪಾಪತಿ, ಎಂ.ಸುರೇಶ, ಪಿ.ಹೊನ್ನೂರುಸಾಬ್, ಚಾನಾಳು ಅಂಬರೀಷ್, ಮಡಿವಾಳಪ್ಪಗೌಡ, ಯಂಕಪ್ಪಶೆಟ್ಟಿ, ನರಸಪ್ಪ, ಯುವರಾಜ, ನಟರಾಜ್‌ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net