6ರಂದು ಶಿವಸಿಂಪಿ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭ

Published on

ಚಿತ್ರದುರ್ಗ: ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜ,ಕುಲಗುರು ಶ್ರೀ ಶಿವದಾಶಿಮಯ್ಯ ಅವರ ಜಯಂತಿ ಅಂಗವಾಗಿ ರಾಜ್ಯಮಟ್ಟದ ಪ್ರತಿಭಾ ಪು ರಸ್ಕಾರ,ಸಾಧಕರಿಗೆ ಸನ್ಮಾನ ಕಾರ‌್ಯಕ್ರಮವನ್ನು ಆ.6ರಂದು ಬೆಳಗ್ಗೆ 11.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದೆ.
ನಟ ದೊಡ್ಡಣ್ಣ ಅವರು ಕಾರ‌್ಯಕ್ರಮ ಉದ್ಘಾಟಿಸುವರು.

ಸಮಾಜದ ಜಿಲ್ಲಾಧ್ಯಕ್ಷ ಇ.ಎಸ್.ಜಯದೇವಮೂರ್ತಿ ಅಧ್ಯಕ್ಷತೆ ವಹಿಸುವರು. ಶಾಸಕ ಕೆ. ಸಿ.ವಿರೇಂದ್ರ ಪಪ್ಪಿ ಅವರು ಶಿವದಾಶಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಹುಬ್ಬಳ್ಳಿ ಅಖಿಲ ಭಾರತ ಲಿಂಗಾಯತ ಶಿವ ಶಿಂಪಿ ಸಂಘದ ಅಧ್ಯಕ್ಷ ಡಾ.ಪ್ರಭಾಕರ್‌ಶಿವಶಿಂಪಿ,ಸಮಾಜದ ದಾವಣಗೆರೆ ಜಿಲ್ಲಾಧ್ಯಕ್ಷ ಗುರುಬಸಪ್ಪ ಬೂಸ್ನೂರು,ಚಿತ್ರದುರ್ಗವೀರಶೈವ ಸಮಾಜ ದ ಪ್ರಭಾರ ಅಧ್ಯಕ್ಷ ಎಸ್.ವಿ.ನಾಗರಾಜಪ್ಪ,ಜಿಲ್ಲಾ ಶಿವಶಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಮುರುಗೇಶ್ ಭಾಗವಹಿಸಲಿದ್ದಾರೆ.

ಅಂದು ಬೆಳಗ್ಗೆ 9.30ಕ್ಕೆ ನಗರದಲ್ಲಿ ನಡೆಯುವ ಶಿವದಾಶಿಮಯ್ಯಅವರ ಭಾವಚಿತ್ರದ ಮೆರವಣಿಗೆಗೆ ನಗರದ ರಂಗಯ್ಯನ ಬಾಗಿಲು ಮದಕರಿ ಗಣಪತಿ ದೇವಾಲಯದ ಬಳಿ ಸಮಾಜದ ಬೆಂಗಳೂರು ಜಿಲ್ಲಾಧ್ಯಕ್ಷ ಸುಭಾಷ್ ಕುಬುಸದ್ ಚಾಲನೆ ನೀಡಲಿದ್ದಾರೆಂದು ಸಮಾಜದ ಜಿಲ್ಲಾ ಕಾ ರ‌್ಯದರ್ಶಿ ಮಲ್ಲಿಕಾರ್ಜನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net