6ರಂದು ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಕಾರ್ಯಕ್ರಮ

mallikarjuna kharge
Published on

ಮೈಸೂರು: ಎಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭವನ್ನು ನ. 6ರಂದು ಬೆಂಗಳೂರಲ್ಲಿ ಆಯೋಜಿಸಿದ್ದು, ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಸೂಚಿಸಲಾಯಿತು.


ನಗರದ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಯಿತು. ಮಾಜಿ ಶಾಸಕ ವಾಸು ಮಾತನಾಡಿ, ಖರ್ಗೆ ಅವರೊಂದಿಗೆ ಮೊದಲಿನಿಂದಲೂ ಉತ್ತಮ ಒಡನಾಟವಿದೆ. ಸಂಸದ, ಶಾಸಕ, ಸಚಿವರಾಗಿ ಸೇವೆ ಸಲ್ಲಿಸಿದ ಖರ್ಗೆ ಅವರನ್ನು ಸಮೀಪದಿಂದಲೇ ನೋಡಿದ್ದೇನೆ. ಬಡತನ ಮತ್ತು ಹೋರಾಟದ ಹಿನ್ನೆಲೆಯಿಂದ ಬಂದು ವಕೀಲರಾಗಿಯೂ ಸೇವೆ ಸಲ್ಲಿಸಿರುವ ಅವರಿಗೆ ಅಗಾಧ ಅನುಭವವಿದೆ. ಸೂಕ್ಷ್ಮಮತಿಯಾದ ಖರ್ಗೆ ಅವರಲ್ಲಿ ದ್ವೇಷದ ಭಾವನೆ ಇಲ್ಲ. ಅಪಾರ ನೆನಪಿನ ಶಕ್ತಿ ಮತ್ತು ಸಮಯ ಪ್ರಜ್ಞೆ ಅವರಲ್ಲಿದೆ. ಇದನ್ನು ಎಲ್ಲರೂ ಅವರಿಂದ ಕಲಿಯಬೇಕು ಎಂದು ಹೇಳಿದರು.


ಪಕ್ಷದ ಗ್ರಾಮಾಂತರ ವಿಭಾಗದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಖರ್ಗೆ ಅವರು ಪಕ್ಷಕ್ಕೆ ನಿಷ್ಠೆ ತೋರಿದ್ದಾರೆ. ನಮಗೆ ಮಾರ್ಗದರ್ಶಕರೂ ಆಗಿದ್ದಾರೆ. ಸಂವಿಧಾನದ 371 ಎ ವಿಧಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಕಲ್ಯಾಣ ಕರ್ನಾಟಕದ ಜನರ ಪಾಲಿಗೆ ಮೆಚ್ಚಿನ ನಾಯಕರಾಗಿದ್ದಾರೆ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್‌ಗಳಾದ ಮೋದಾಮಣಿ, ಟಿ.ಬಿ.ಚಿಕ್ಕಣ್ಣ, ನಾರಾಯಣ್, ಬಿ.ಕೆ. ಪ್ರಕಾಶ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಪ್ರಶಾಂತ್, ಪ್ರದೀಪ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಮುಖಂಡರಾದ ಕೆ.ಹರೀಶ್‌ಗೌಡ, ಶಿವನಾಗಪ್ಪ, ಲೋಕೇಶ್‌ರಾವ್, ಜೇಸುದಾಸ್, ಭಾಸ್ಕರ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net