ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ 6ರಂದು

school-children
Published on

ಕಟಕೋಳ: ಗ್ರಾಮದ ಗಂಗಾಧರ ಕುಮಾರಸ್ವಾಮಿಗಳ ಪ್ರೌಢಶಾಲೆಯಲ್ಲಿ ಮಾ.6ರಂದು ಬೆಳಗ್ಗೆ 10 ಗಂಟೆಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದೆ.

ಕಟಕೋಳ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ಕವಿವಿ ಸಮಿತಿ ಅಧ್ಯಕ್ಷ ಎ.ಸಿ.ಸುರಗ ಅಧ್ಯಕ್ಷತೆ ವಹಿಸುವರು. ಸಮಿತಿ ಉಪಾಧ್ಯಕ್ಷ ಎನ್.ಬಿ.ತೋಡಕರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅತಿಥಿಗಳಾಗಿ ಎಂ.ಎಂ.ಆತಾರ, ಸಿ.ಬಿ.ಕಳಸಪ್ಪನವರ, ಸಿ.ಎ.ದೇಸಾಯಿ, ಎ.ಟಿ.ಶೆಟ್ಟಿಸದಾವರ್ತಿ, ಎಸ್.ಬಿ.ಕಳಸಪ್ಪನವರ, ಡಾ.ಪಿ.ಕೆ.ರಾಠೋಡ ಆಗಮಿಸುವರು. ಎಸ್.ವಿ.ಕಲ್ಯಾಣಶೆಟ್ಟಿ ಉಪನ್ಯಾಸ ನೀಡುವರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 2007-08ನೇ ಸಾಲಿನ ನಗದು ಪುರಸ್ಕಾರ ನೀಡಲಾಗುವುದು ಎಂದು ಶಾಲೆ ಮುಖ್ಯ ಶಿಕ್ಷಕ ಎಸ್.ಟಿ.ಹುಣಸಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net