69ನೇ ಮಹಾಗಣಪತಿ ಮಹೋತ್ಸವ

69ನೇ ಮಹಾಗಣಪತಿ ಮಹೋತ್ಸವ
Published on

ಹಾಸನ : ನಗರದ ಶ್ರೀ ಗಣಪತಿ ಸೇವಾ ಸಮಿತಿಯ 69ನೇ ಮಹಾಗಣಪತಿ ಮಹೋತ್ಸವ ಸೆ.18ರಿಂದ ಅ.7ರವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಎಚ್.ನಾಗರಾಜು ತಿಳಿಸಿದರು.

ಈ ವರ್ಷ 9 ಅಡಿ ಎತ್ತರ ಮಣ್ಣಿನ ಗಣಪತಿ ಮೂರ್ತಿ ಕೂರಿಸುತ್ತಿದ್ದು, ಸೆ.18ರಂದು ಮಧ್ಯಾಹ್ನ 12.30ಕ್ಕೆ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಶಾಸಕ ಎಚ್.ಪಿ.ಸ್ವರೂಪ್ ಸೇರಿ ಇತರೆ ಪ್ರಮುಖರು ಭಾಗವಹಿಸಲಿದ್ದಾರೆ. ಅ.6ರವರೆಗೆ ಪ್ರತಿದಿನ ಬೆಳಗ್ಗೆ ಸಾಮೂಹಿಕ ಅಭಿಷೇಕ, ಪೂಜಾ ಕೈಂಕರ್ಯ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾಗಣಪತಿ ಮತ್ತು ಸ್ವರ್ಣ ಗೌರಿ ಉತ್ಸವದಲ್ಲಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಸೆ.24ರಂದು ಶತ ರುದ್ರಾಭಿಷೇಕ, ಅ.1ರಂದು ಮಹಾಗಣಪತಿ ಹೋಮ ನಡೆಸಲಾಗುವುದು ಎಂದರು.

ಅ.7ರಂದು ವಿಸರ್ಜನಾ ಮಹೋತ್ಸವ ಜರುಗಲಿದ್ದು, ಬೆಳಿಗ್ಗೆ 10 ಗಂಟೆಗೆ ಪುಷ್ಪಾಲಂಕೃತ ಮಂಟಪದಲ್ಲಿ ಗಣೇಶನ ಮೂರ್ತಿಯನ್ನು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜಾನಪದ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಸಂಜೆ ನಗರದ ದೇವಿಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ವಿಸರ್ಜಿಸಲಾಗುವುದು. ಅಲ್ಲದೆ ಅ.10ರಂದು ಮಧ್ಯಾಹ್ನ 12.30ಕ್ಕೆ ಗಣಪತಿ ಉತ್ಸವದ ಪ್ರಯುಕ್ತ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನ್ನವೀರಪ್ಪ, ಸದಸ್ಯರಾದ ಪ್ರಮೋದ್, ಕಿರಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net