69ಲೀ. ಗೋವಾ ನಿರ್ಮಿತ ಮದ್ಯ ವಶ

Liquer Bottle
Published on

ಕಾಸರಗೋಡು: ಅಬಕಾರಿ ಬದಿಯಡ್ಕ ರೇಂಜ್ ಅಧಿಕಾರಿಗಳು ಬದಿಯಡ್ಕ ಸನಿಹದ ವಿದ್ಯಾಗಿರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿಯ ಗುಪ್ತ ಸ್ಥಳದಲ್ಲಿ ದಾಸ್ತಾನಿರಿಸಿದ್ದ 69.12ಲೀ. ಗೋವಾ ನಿರ್ಮಿತ ಮದ್ಯ ವಶಪಡಿಸಿಕೊಂಡಿದ್ದಾರೆ. ಮದ್ಯ ದಾಸ್ತಾನಿರಿಸಿದ ಆರೋಪಿಗಳ ಮಾಹಿತಿ ಲಭ್ಯವಾಗಿಲ್ಲ. 180ಎಂ.ಎಲ್‌ನ 384ಪ್ಯಾಕೆಟ್‌ಗಳನ್ನು ನಾಲ್ಕು ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತುಂಬಿ ಅವಿತಿರಿಸಲಾಗಿತ್ತು. ಅಸಿಸ್ಟೆಂಟ್ ಎಕ್ಸೈಸ್ ಅಧಿಕಾರಿ ದಿನೇಶನ್ ನೇತೃತ್ವದ ತಮಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net