69 ಗುಣ, 53 ಜನರಿಗೆ ಸೋಂಕು

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ 53 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ 1699ಕ್ಕೇರಿದೆ. ದಿನೇದಿನೆ ಹೆಚ್ಚುತ್ತಿರುವ ಪಾಸಿಟಿವ್ ಮತ್ತು ಸಾವಿನ ಪ್ರಕರಣಗಳು ಜಿಲ್ಲೆ ಜನರಲ್ಲಿ ತಲ್ಲಣ ಮೂಡಿಸಿವೆ. ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಸಮಾಧಾನಕರ ಸಂಗತಿ.
ಇಂದು 69 ಸೋಂಕಿತರು ಚೇತರಿಕೆಯಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈ ಮೂಲಕ ಗುಣ ಹೊಂದಿದವರ ಸಂಖ್ಯೆ 1310ಕ್ಕೇದೆ. 362 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ. ಕೋವಿಡ್ ಆಸ್ಪತ್ರೆ ಐಸಿಯುದಲ್ಲಿ ಇರುವವರ ಸಂಖ್ಯೆ 13 ಆಗಿದೆ. 11 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಎಂಟು ಐಎಲ್ಐ, ಒಂದು ಸಾರಿ ಪ್ರಕರಣ, ಸೋಂಕಿತರ ಸಂಪರ್ಕಕ್ಕೆ ಬಂದವರು 14, ಅಂತಾರಾಜ್ಯ ಪ್ರವಾಸಕ್ಕೆ ಸಂಬಂಧಿಸಿದ 17 ಜನರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
23 ಮಹಿಳೆಯರು, ಏಳು ತಿಂಗಳ ಹಸುಗೂಸು ಸೇರಿ 10 ಮಕ್ಕಳಿಗೂ ಕರೊನಾ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net