ಶಿರಸಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ‘ 69 ಪ್ರಕರಣ, 35 ಸಾವಿರ ರೂ, ದಂಡ

Crime Logo
Published on

ಶಿರಸಿ: ಅಪರಾಧ ಕೃತ್ಯಗಳನ್ನೆಸಗಿ ಹಾಗೂ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಂದ ಕಣ್ತಪ್ಪಿಸಿಕೊಳ್ಳುವ ಸಲುವಾಗಿ ವಾಹನಗಳಿಗೆ ವಿವಿಧ ರೀತಿಯಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿಕೊಂಡ ಬಗ್ಗೆ ಶಿರಸಿ ನಗರ ಠಾಣೆಯ ಪೊಲೀಸರು ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇವರಿಗೆ ಒಟ್ಟು 15 ಸಾವಿರ ರೂ. ದಂಡ ವಿಧಿಸಿದ್ದಾರೆ.


ಇದರ ಹೊರತಾಗಿ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿ ಒಟ್ಟು 39 ಪ್ರಕರಣಗಳನ್ನು ದಾಖಲಿಸಿ 20500 ರೂ. ದಂಡ ವಿಧಿಸಲಾಗಿದೆ.
ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್., ವೃತ್ತ ನಿರೀಕ್ಷಕ ಶಶಿಕಾಂತ ವರ್ವ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್​ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿ ನಾರಾಯಣ ರಾಥೋಡ್, ಮಂಜುನಾಥ ಪಾವಗಡ, ಪೂಜಣ್ಣ ದಂಡಿನ್, ಉಮೇಶ ಪೂಜಾರಿ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net