688 ಜನ ಆಸ್ಪತ್ರೆಯಿಂದ ಬಿಡುಗಡೆ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಮತ್ತೇ 34 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ 42 ಜನ ಚೇತರಿಸಿಕೊಂಡು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ 34 ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 1160ಕ್ಕೇರಿದಂತಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಹೊಸ ಪ್ರಕರಣಗಳಲ್ಲಿ ಒಂಬತ್ತು ತಿಂಗಳ ಹಸುಗೂಸು ಸೇರಿ ಒಟ್ಟು ಎಂಟು ಮಕ್ಕಳಿಗೆ ಸೋಂಕು ತಗುಲಿದೆ. 14 ಮಹಿಳೆಯರಿಗೂ ಕರೊನಾ ಬಂದಿದೆ. ಐದು ಪ್ರಕರಣಗಳು ಇತರೆ ಸೋಂಕಿತರ ಸಂಪರ್ಕದಿಂದ ಬಂದಿದ್ದು, ಒಬ್ಬ ಸೋಂಕಿತನಿಗೆ ಪೇಷಂಟ್ 8271 ಸಂಪರ್ಕದಿಂದ ಬಂದಿದ್ದರೆ ಇನ್ನುಳಿದ ನಾಲ್ವರಿಗೆ ಪೇಷಂಟ್ 7903 ಸಂಪರ್ಕದಿಂದ ಬಂದಿದೆ. ಎರಡು ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ಮತ್ತು ಯಾದಗಿರಿಗಳಿಂದ ಬಂದವರಿಗೊಬ್ಬೊಬ್ಬರಿಗೆ ಕರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1160 ಆಗಿದ್ದು, ಇವರಲ್ಲಿ ಶನಿವಾರ 42 ಪ್ರಕರಣಗಳು ಸೇರಿ ಒಟ್ಟು 688 ಜನ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. 11 ಜನ ಮೃತಪಟ್ಟಿದ್ದಾರೆ. 461 ಸಕ್ರೀಯ ಪ್ರಕರಣಗಳು ಇವೆ. ಐಸಿಯು ವಾಡರ್್ದಲ್ಲಿ ಶುಕ್ರವಾರ 12 ಪ್ರಕರಣಗಳಿದ್ದವು. ಈಗ ಈ ಸಂಖ್ಯೆ 11ಕ್ಕೆ ಇಳಿದಿದೆ. ಕಲಬುರಗಿ ಜಿಲ್ಲೆಯ ಪಾಲಿಗೆ ಜೂನ್ ತಿಂಗಳು ಗಂಡಾಂತರ ಜಿಲ್ಲೆಯಾಗಿ ಮಾರ್ಪಟ್ಟಿದ್ದನ್ನು ಅಲ್ಲಗಳೆಯಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net