68 ಗ್ರಾಂ ತೂಕದ ಚಿನ್ನದ ಬಳೆಗಳ ಕಳವು

udp-theft
Published on

ಹಾಸನ: ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿಟ್ಟುಕೊಂಡಿದ್ದ 68 ಗ್ರಾಂ ತೂಕದ 4 ಚಿನ್ನದ ಬಳೆ ಕಳವು ಮಾಡಿರುವ ಘಟನೆ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಗರದ ಬಿ.ಟಿ.ಕೊಪ್ಪಲು ನಿವಾಸಿ ವೈ.ಜಯಂತಿ ಎಂಬುವರು ಜೂ.13 ರಂದು 68 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಗಿರವಿ ಇಡಲು ಮನೆಯಿಂದ ತೆಗೆದುಕೊಂಡು ಸಿಟಿ ಬಸ್ ಹತ್ತಿ ನಗರ ಬಸ್ ನಿಲ್ದಾಣದಲ್ಲಿ ಇಳಿದರು. ಸಾಲಗಾಮೆ ರಸ್ತೆಯಲ್ಲಿರುವ ಸಾಯಿ ಬಾಬಾ ಮಂದಿರಕ್ಕೆ ಹೋಗಿ ವಾಪಸ್ ಬಸ್ ನಿಲ್ದಾಣಕ್ಕೆ ಬಂದು ಸಿಂಡಿಕೇಟ್ ಬ್ಯಾಂಕ್ ಬಳಿ ಬ್ಯಾಗ್ ನೋಡಿದಾಗ ಅವರ ಬ್ಯಾಗ್ ಜಿಪ್ ತೆಗೆದಿತ್ತು. ಬ್ಯಾಗ್ ಒಳಗಿನ ಪರ್ಸ್‌ನಲ್ಲಿದ್ದ ಒಡವೆಗಳನ್ನು ಕಳ್ಳರು ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಪ್ರಯಾಣಿಕರ ಜನಜಂಗುಳಿ ಇದ್ದ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳ್ಳತನವಾಗಿರುವ ಚಿನ್ನದ ಬಳೆಗಳ ಮೌಲ್ಯ 4,09ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net