ಮಾಗಡಿಯ 68 ಗ್ರಾಮಗಳು ನೆಲಮಂಗಲಕ್ಕೆ!

Published on

ಸೋಲೂರು ಹೋಬಳಿ ಇನ್ನು ಬೆಂ.ಗ್ರಾಮಾಂತರ ಪಾಲು! > ಕಂದಾಯ ಇಲಾಖೆ ಅಧಿಸೂಚನೆ

ಮಾಗಡಿ: ರಾಜಕೀಯ, ವೈಯಕ್ತಿಕ ಅಸ್ತಿತ್ವಕ್ಕಾಗಿ ಸೋಲೂರು ಹೋಬಳಿಯನ್ನು ವಿಭಜಿಸುವ ಯತ್ನ ಯಶಸ್ವಿಯಾದಂತಿದ್ದು,

ಇದಕ್ಕೆ ಪುಷ್ಟಿ ನೀಡುವಂತೆ ಮಾಗಡಿ ತಾಲೂಕಿನ 68 ಕಂದಾಯ ಗ್ರಾಮಗಳನ್ನು ನೆಲಮಂಗಲಕ್ಕೆ ಸೇರ್ಪಡೆಗೊಳಿಸಿ

ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ.

ಹೌದು.... ಮಾಗಡಿ ತಾಲೂಕಿನ ಸೋಲೂರು ಸೇರಿ 68 ಕಂದಾಯ ಗ್ರಾಮಗಳನ್ನು ಬೇರ್ಪಡಿಸಿ, ನೆಲಮಂಗಲ ತಾಲೂಕಿಗೆ ಸೇರಿಸಿದ ಕುರಿತು ನ.27ರಂದೇ ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯಪತ್ರದ ಪ್ರತಿ ಇನ್ನೂ ಮಾಗಡಿ ತಾಲೂಕು ಆಡಳಿತ ತಲುಪಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ನಿರ್ಧಾರ ವಿರೋಧಿಸಿ ಸಹಸ್ರಾರು ರೈತರು ಆೇಪಣೆ ಸಲ್ಲಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ನೋಟಿಫಿಕೇಷನ್​ ಹೊರಡಿಸಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದ್ದು, ಆದೇಶ ಪ್ರತಿ ಕಂಡು ಸಾರ್ವಜನಿಕರು, ಹೋರಾಟಗಾರರು ಮತ್ತು ಆೇಪಣಾ ಅರ್ಜಿದಾರರು ಆಕ್ರೋಶಗೊಂಡಿದ್ದಾರೆ.

ನ.3ಕ್ಕೆ ಹೈಕೋಟ್​ಗೆ ಪಿಐಎಲ್​ಈ ಹಿಂದೆ ಸರ್ಕಾರವೇ ಆೇಪಣೆಗೆ ಕಾಲಾವಕಾಶ ನೀಡಿದ್ದರಿಂದ ಕೋರ್ಟ್​ಗೆ ಅರ್ಜಿ ಹಾಕಲು ಕಾಯುವ ಪರಿಸ್ಥಿತಿ ಇತ್ತು. ಆೇಪಣೆ ಸಲ್ಲಿಸುವ ಅವಧಿ ಮುಗಿದು ಇಂದಿಗೆ(ಅ.30) 21 ದಿನಗಳಾಗಿವೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಆೇಪಣಾ ಅರ್ಜಿ ಬದಿಗೊತ್ತಿ ಒಂದು ಹೆಜ್ಜೆ ಮುಂದೆ ಹೋಗಿರುವುದರಿಂದ ತಾಲೂಕು ವಕೀಲ ಸಂ, ಕಾರ್ಮಿಕರ ಸಂಟನೆ, ರೈತ ಸಂಟನೆ, ಕನ್ನಡ ಸಂಟನೆಗಳು ಮತ್ತು ಆೇಪಣಾ ಅರ್ಜಿದಾರರನ್ನು ಕೆರಳಿಸಿದೆ. ರಾಜ್ಯ ಅಧೀನ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ನೇರವಾಗಿ ಕಂದಾಯ ಸಚಿವರನ್ನೂ ಭೇಟಿ ಮಾಡಿ, ಮುಂದಿನ ನ.3ರಂದು ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಲು ಸಿದ್ಧತೆ ಕೈಗೊಂಡಿದ್ದಾರೆ. ಅದಕ್ಕಾಗಿ ತಾಲೂಕಿನ ಹೋರಾಟಗಾರರು ಕಾನೂನು ತರ ಸಲಹೆ ಪಡೆಯಲು ಮುಂದಾಗಿದ್ದಾರೆ.ನಿಖರ ಸಹಿ ಇಲ್ಲವೆ?ಸಂಸದ ಡಾ.ಸಿ.ಎನ್​.ಮಂಜುನಾಥ್​, ರೈತಸಂಟನೆ, ಕಾರ್ಮಿಕ ಸಂಟನೆ, ಕನ್ನಡ ಸಂಟನೆಗಳು, ವಕೀಲರ ಸಂ ಮತ್ತು ಸಾರ್ವಜನಿಕರು ರಾಜಭವನಕ್ಕೆ ನೀಡಿರುವ ಅರ್ಜಿಯನ್ನು ರಾಜ್ಯಪಾಲರು ಪರಿಶೀಲಿಸಿ, ಸರ್ಕಾರಕ್ಕೆ ಕಳೆದ ತಿಂಗಳಲ್ಲೇ ನೋಟಿಸ್​ ಜಾರಿಗೊಳಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಾಥಮಿಕ ಅಧಿಸೂಚನೆ ಪತ್ರದಲ್ಲಿ ರಾಜ್ಯಪಾಲರ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿಗಳ ನಿಖರವಾದ ಸಹಿ ಇಲ್ಲವೆಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.ಮೀಸಲಾತಿಗಾಗಿ ಶ್ರೀನಿವಾಸ್​ ಅಧಿಕಾರ ದುರ್ಬಳಕೆ?ನೆಲಮಂಗಲ ಶಾಸಕ ಶ್ರೀನಿವಾಸ್​ ಮೀಸಲಾತಿಯನ್ನು ಉಳಿಸಿಕೊಳ್ಳಲು ಕಂದಾಯ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು, ಸರ್ಕಾರದ ಮೇಲೆ ಒತ್ತಡ ಹಾಕಿ ಕಾನೂನಿನ ನಿಯಮ ಗಾಳಿಗೆ ತೂರುತ್ತಿದ್ದಾರೆ ಎಂದು ಮಾಗಡಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾವು ನೆಲಮಂಗಲ ಶಾಸಕರ ತಂತ್ರಕ್ಕೆ ಮರುಳಾಗುವುದಿಲ್ಲ, ಏನಿದ್ದರೂ ಕೋರ್ಟ್​ನಲ್ಲಿ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ನವೆಂಬರ್​ ತಿಂಗಳ ಎರಡನೇ ವಾರ 5 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ, ಹೋರಾಟ ಆರಂಭಿಸೋಣ ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದ್ದರು.ಅದು ಆರಂಭವಾಗುವ ಮುನ್ನವೇ ನೋಟಿಫಿಕೇಷನ್​ ಹೊರಬಿದ್ದಿದೆ.

ತಾಲೂಕು ಕಚೇರಿಗೆ ಇಲ್ಲಿಯವರೆಗೂ ಯಾವ ಆದೇಶ ಬಂದಿಲ್ಲ. ಕಂದಾಯ ಇಲಾಖೆಯ ಇಂತಹ ಉನ್ನತ ಮಟ್ಟದ ಸೇರ್ಪಡೆ ಬದಲಾವಣೆಗೆ ರಾಜ್ಯಪಾಲರ ಸಹಿ ಕಡ್ಡಾಯ ಅಲ್ಲವೆ?. > ಶರತ್​ ಕುಮಾರ್​ ತಹಸೀಲ್ದಾರ್​ ಸೋಲೂರನ್ನು ಬೇರ್ಪಡಿಸುವ ಕುರಿತು ಚರ್ಚಿಸಲು ಅ.30ರಂದು ವಕೀಲರ ಸಭೆ ಕರೆಯಲಾಗಿದೆ. ನಂತರ ಪಿಐಎಲ್​ ಸಲ್ಲಿಸಲು ಕ್ರಮಕೈಗೊಳ್ಳಲಾಗುವುದು. > ಪಾಪಣ್ಣ ಮಾಗಡಿ ತಾಲೂಕು ವಕೀಲರ ಸಂದ ಮಾಜಿ ಅಧ್ಯಕ್ಷ ಸೋಲೂರು ಮಾಗಡಿ ತಾಲೂಕಿನ ಸ್ವತ್ತು. ಇದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಪ್ರಾಣಹೋದರೂ ಸರಿ ಸೋಲೂರನ್ನು ಮಾಗಡಿ ತಾಲೂಕಿನಲ್ಲೇ ಉಳಿಸಿಕೊಳ್ಳುತ್ತೇವೆ. ***ನಾಳೆ ಎಲ್ಲ ಸಂಟನೆಗಳ ಸಭೆ ಕರೆದು, ರಸ್ತೆ ತಡೆ ಹಾಗೂ ವಿಧಾನಸೌಧ ಮುತ್ತಿಗೆಗೆ ಬೃಹತ್​ ಹೋರಾಟ ರೂಪಿಸಲಾಗುವುದು. > ಡಾ.ಪ್ರಸನ್ನ ಗೌಡ ರಾಜ್ಯ ಕಟ್ಟಡ ಮತ್ತು ಆಸಂಟಿತ ಕಾರ್ಮಿಕರ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net