ಲಾಭದಾಸೆ ತೋರಿಸಿ 68.94 ಲಕ್ಷ ರೂ. ಗುಳುಂ

cybe crime
Published on

ಹುಬ್ಬಳ್ಳಿ: ಷೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿದ ಬೆಂಗಳೂರಿನ ಕೆಂಚಪ್ಪ ಹೊಸಮನಿ ಎಂಬಾತ ಅಪರಿಚಿತರ ಖಾತೆಗೆ 68.94 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.

ಇಲ್ಲಿನ ಮಂಜುನಾಥನಗರ ಸಂಬಂಧಿಕರ ಮನೆಗೆ ಬಂದಿದ್ದ ಕೆಂಚಪ್ಪ, ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದ ಎಕ್ಸ್​ಫ್ಲೋಮಾರ್ಕೆಟ್ಸ್.ಕಾಂ ಜಾಹೀರಾತು ನೋಡಿದ್ದಾರೆ. ಇದರಲ್ಲಿದ್ದ ಮೊಬೈಲ್ ಫೋನ್ ಸಂಖ್ಯೆಗೆ ಸಂರ್ಪಸಿದ್ದಾರೆ. ಆಕಡೆಯಿಂದ ಮಾತನಾಡಿದ ಅಪರಿಚಿತ ವ್ಯಕ್ತಿ, ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಷೇರ್ ಮಾರುಕಟ್ಟೆಯಲ್ಲಿ ತೊಡಗಿಸಿ, ಹೆಚ್ಚಿನ ಲಾಭಾಂಶ ನಿಮಗೆ ಕೊಡಲಾಗುವುದು ಎಂದು ನಂಬಿಸಿದ್ದಾನೆ. ಆನ್​ಲೈನ್ ಮೂಲಕ ವಿವಿಧ ಖಾತೆಗಳಿಂದ ಹಣ ವರ್ಗಾಯಿಸಿಕೊಂಡಿದ್ದಲ್ಲದೇ ಕೆಂಚಪ್ಪ ಅವರ ಆಪ್ತ ಸಹಾಯಕರಿಗೂ ಹಣ ಹೂಡಿಕೆ ಮಾಡುವಂತೆ ಸಂದೇಶ ಕಳುಹಿಸಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net