ಶಾಲೆಗಳಿಗೆ ಶೇ. 67 ಉಚಿತ ಪುಸ್ತಕ ಪೂರೈಕೆ

mnd Books
Published on

ಮುಂಡಗೋಡ: ಶೈಕ್ಷಣಿಕ ವರ್ಷದ ಒಂದರಿಂದ ಹತ್ತನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಪುಸ್ತಕಗಳು ಶಿಕ್ಷಣ ಇಲಾಖೆಗೆ ಶೇ. 67ರಷ್ಟು ಮಾತ್ರ ಪೂರೈಕೆಯಾಗಿರುವುದು ಕಂಡು ಬಂದಿದೆ.

2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಣೆ ಮಾಡುವ ಉಚಿತ ಪುಸ್ತಕಗಳು ಹಾಗೂ ಖಾಸಗಿ ಶಾಲೆಗಳಿಗೆ ಮಾರಾಟ ಮಾಡುವ ಪುಸ್ತಕಗಳು ಕಳೆದ ಒಂದು ತಿಂಗಳಿಂದ ಹಂತ ಹಂತವಾಗಿ ಬಂದಿರುವ ಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಸೋಮವಾರದಿಂದ ತಾಲೂಕಿನ ಎಲ್ಲ ಶಾಲೆಗಳಿಗೆ ಆ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ.

ಪುಸ್ತಕ ಬೇಡಿಕೆ: ತಾಲೂಕಿನಲ್ಲಿ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಸೇರಿದಂತೆ 22 ಪ್ರೌಢ, 61 ಪ್ರಾಥಮಿಕ, 78 ಕಿರಿಯ ಪ್ರಾಥಮಿಕ ಶಾಲೆ ಸೇರಿ ಒಟ್ಟು ತಾಲೂಕಿನಲ್ಲಿ 169 ಶಾಲೆಗಳಿವೆ. ಪ್ರಸಕ್ತ ಸಾಲಿನ ಶೈಕ್ಷಣಿಳ ಶಿಕ್ಷಣಕ್ಕಾಗಿ 2,33,850 ಪುಸ್ತಕಗಳಿಗಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಬೇಡಿಕೆಯಂತೆಯೆ ಮೇ 26ರವರೆಗೆ 1,60,928 ಪುಸ್ತಕಗಳು ಪೂರೈಕೆಯಾಗಿವೆ ಇನ್ನೂ 70 ಸಾವಿರದಷ್ಟು ಪುಸ್ತಕಗಳು ಬರುವುದು ಬಾಕಿಯಿದೆ.

ಈ ವರ್ಷ ಮೇ 26ರವರೆಗೆ ಶೇ. 67ರಷ್ಟು ಪುಸ್ತಕಗಳು ಪೂರೈಕೆಯಾಗಿದ್ದು, ಉಳಿದ ಪುಸ್ತಕಗಳು ನಾಲ್ಕೈದು ದಿನಗಳೊಳಗಾಗಿ ಬರುವ ಸಾಧ್ಯತೆಗಳಿವೆ. ನಮ್ಮ ಇಲಾಖೆಯಲ್ಲಿ ಸಂಗ್ರಹಿಸಿದ್ದ ಪುಸ್ತಕಗಳನ್ನು ಇದೀಗ ಬೇಡಿಕೆಗೆ ಅನುಗುಣವಾಗಿ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಶಾಲೆ ಆರಂಭದ ವೇಳೆ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ವ್ಯವಸ್ಥೆ ಮಾಡಲಾಗುವುದು. | ಸುಮಾ ಜಿ. ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net