

ಗೋಣಿಕೊಪ್ಪ: ಕೊಡಗು ಹಿಂದು ಮಲಯಾಳಿ ಸಮಾಜ ಯೂತ್ ವಿಂಗ್ ಹಾಗೂ ಕೊಡಗು ರಕ್ತನಿಧಿ ಘಟಕ ಸಹಯೋಗದಲ್ಲಿ ಬುಧವಾರ ಮಲಯಾಳಿ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 66 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
17 ಮಹಿಳೆಯರು ಸೇರಿದಂತೆ 66 ಜನರು, ಮಲಯಾಳಿ ಸಮಾಜದ 43 ಸದಸ್ಯರು ರಕ್ತದಾನ ಮಾಡಿದರು. ಸಮಾಜದ ಅಮೃತ್‌ರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಕನಿಷ್ಠ ವರ್ಷಕ್ಕೊಮ್ಮೆ ರಕ್ತದಾನ ಮಾಡುವುದರಿಂದ ಬೇರೆಯವರ ಜೀವನಕ್ಕೆ ಸ್ಪಂದಿಸಿದಂತಾಗುತ್ತದೆ ಎಂದರು.
ಕೊಡಗು ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ.ಕೆ.ಕರುಂಬಯ್ಯ ಮಾತನಾಡಿ, ರಕ್ತದಾನ ಮಾಡುವ ಬಗ್ಗೆ ಬಹಳಷ್ಟು ಜನರು ಮೌಢ್ಯತೆ ಹೊಂದಿದ್ದಾರೆ. ರಕ್ತ ನೀಡುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ರಕ್ತದೊತ್ತಡ ಮತ್ತು ಹೃದಯಾಘಾತ ಸಂಬಂಧಿಸಿದಂತೆ ಸಮಸ್ಯೆ ನಿಯಂತ್ರಿಸಬಹುದಾಗಿದೆ ಎಂದರು.
ಹಲವು ಬಾರಿ ರಕ್ತದಾನ ಮಾಡಿದ ವಿ.ವಿ.ಅರುಣ್‌ಕುಮಾರ್, ಸುಷ ಮೋಹನ್, ವೇಣು ಕಣ್ಣನ್ ಅವರನ್ನು ಸನ್ಮಾನಿಸಲಾಯಿತು. ಯೂತ್‌ವಿಂಗ್ ಅಧ್ಯಕ್ಷ ಎ.ಎಂ.ಅಖಿಲ್, ಉದ್ಯಮಿ ಕೆ.ಜಿ.ಜಯೇಂದ್ರ, ಸಮಾಜ ಸೇವಕ ಮಂಜು ಸುರೇಶ್ ರೈ, ಶ್ರೀಮಂಗಲ ಉಪಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಪಾಲಿಬೆಟ್ಟ ಉಪಸಮಿತಿ ಅಧ್ಯಕ್ಷ ರಿನೀಶ್ ಇದ್ದರು.