

ಬೈಲಹೊಂಗಲ: ಇಲ್ಲಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ 19 ನಾಮಪತ್ರ ಸಲ್ಲಿಕೆಯಾಗಿವೆ.
ಕಿಸಾನ್ ಸಹಕಾರ ಪೆನೆಲ್‌ನಿಂದ ಗುರುಪುತ್ರಪ್ಪ ಹೊಸಮನಿ, ಮಲ್ಲಪ್ಪ ಮುರಗೋಡ, ಅಶೋಕ ಹುದ್ದಾರ, ಗಂಗಾಧರ ಹೊಂಡೇದ, ನಿಂಗಪ್ಪ ತಡಕೋಡ, ಬಸಪ್ಪ ದೇಗಾಂವಿ, ರುದ್ರಗೌಡ ಪಾಟೀಲ, ಪುಂಡಲೀಕ ನೀರಲಕಟ್ಟಿ, ಚಂದ್ರಶೇಖರ ಭರಮಣ್ಣವರ, ನೇತ್ರಾ ಬಬಲಿ ಹಾಗೂ ಇತರರಾದ ಸುವರ್ಣಾ ಬಸವರಾಜ ಬಾಳೇಕುಂದರಗಿ, ಪ್ರದೀಪ ವಣ್ಣೂರ, ಗುರುಲಿಂಗಯ್ಯ ಬೋಗೂರ, ಹನುಮಂತ ಸಾಲಹಳ್ಳಿ, ಶಂಕರೆಪ್ಪ ಕಮತಗಿ, ಬಸವರಾಜ ಪರವಣ್ಣವರ, ದುರಗಪ್ಪ ಮ್ಯಾಗೇರಿ, ಬಸವರಾಜ ಆನೇಮಠ, ಅದಶ್ಯಪ್ಪ ಕೊಟಬಾಗಿ, ವಿಠ್ಠಲ ಹೊಸೂರ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿವರೆಗೆ ಅ ವರ್ಗದ ಕಬ್ಬು ಬೆಳೆಗಾರರ ಸದಸ್ಯರ ಸಾಮಾನ್ಯ ಕ್ಷೇತ್ರಕ್ಕೆ 35, ಮಹಿಳಾ ಕ್ಷೇತ್ರಕ್ಕೆ 7, ಪ.ಜಾ ಕ್ಷೇತ್ರಕ್ಕೆ 6, ಪ.ಪಂ ಕ್ಷೇತ್ರಕ್ಕೆ 4, ಹಿಂದುಳಿದ ಅ ಕ್ಷೇತ್ರ 4, ಹಿಂದುಳಿದ ಬ ಕ್ಷೇತ್ರಕ್ಕೆ 2, ಬ ವರ್ಗದ ಸಂಘಗಳ ಕ್ಷೇತ್ರಕ್ಕೆ 2, ಡ ವರ್ಗದ ಕಬ್ಬು ಬೆಳೆಗಾರರಲ್ಲದ ಕ್ಷೇತ್ರಕ್ಕೆ 6 ಒಟ್ಟು 66 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಎಂ.ಎಸ್.ಮಣಿ ತಿಳಿಸಿದ್ದಾರೆ.
ದಿ.ಆರ್.ಸಿ.ಬಾಳೇಕುಂದರಗಿ ಅವರೊಂದಿಗೆ ಸೇರಿ ಷೇರು ಸಂಗ್ರಹಿಸಿ, ಸತತ ಪ್ರಯತ್ನದ ಮೂಲಕ ಕಾರ್ಖಾನೆ ಸ್ಥಾಪಿಸಲಾಗಿದೆ. ಸಹಕಾರ ಸಿಗದ್ದರಿಂದ ರಾಜಿನಾಮೆ ನೀಡಿದ್ದೆ ಎಂದು ಬಸವರಾಜ ಬಾಳೇಕುಂದರಗಿ ಹೇಳಿದ್ದರಲ್ಲಿ ಸತ್ಯವಿಲ್ಲ. ತಾವಾಗಿಯೇ ಬಿಟ್ಟು ಹೋಗಿದ್ದಾರೆ. ರೈತ ಸದಸ್ಯರ ಸಹಕಾರದಿಂದ ಕಾರ್ಖಾನೆ ಅಭಿವೃದ್ಧಿಪಡಿಸಲು ಕಿಸಾನ್ ಸಹಕಾರ ಪೆನೆಲ್ ಬೆಂಬಲಿಸಬೇಕೆಂದು ಮನವಿ ಮಲ್ಲಪ್ಪ ಮುರಗೋಡ, ಗುರುಪುತ್ರಪ್ಪ ಹೊಸಮನಿ ಮನವಿ ಮಾಡಿದ್ದಾರೆ.