

ಸಂಡೂರು: ಮಹಾರಾಷ್ಟ್ರದ ನಾಗಪುರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ದೀಕ್ಷಾ ಸ್ಥಳಕ್ಕೆ ಪ್ರವಾಸ ಆಯೋಜಿಸಲಾಗಿದ್ದು, ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ 66 ಜನ ಅರ್ಜಿ ಹಾಕಿದ್ದರು ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ.ವೆಂಕಟೇಶ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ದೀಕ್ಷಾ ಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಅ.4ರವರೆಗೆ ಪ್ರವಾಸ ನಡೆಯಲಿದ್ದು, 66 ಜನರೊಂದಿಗೆ ನಮ್ಮ ಕಚೇರಿ ಸಿಬ್ಬಂದಿ ಸುಹಾಸ್, ತೇಜಸ್ವಿನಿ, ಶಿವಕುಮಾರ್ ಹೊರಟಿದ್ದಾರೆ ಎಂದರು. ತಹಸೀಲ್ದಾರ್ ಅನಿಲ್ ಕುಮಾರ್ ಪ್ರವಾಸಕ್ಕೆ ಚಾಲನೆ ನೀಡಿದರು. ತಾಪಂ ಇಒ ಮಡಗಿನ ಬಸಪ್ಪ, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ, ತಾಲೂಕು ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ, ಹೊನ್ನೂರಸ್ವಾಮಿ ಇತರರಿದ್ದರು.