

ಕಳಸ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 439 ಕೋಟಿ ರೂ. ವ್ಯವಹಾರ ನಡೆಸಿ 33 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ತಿಳಿಸಿದರು.
ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 3756 ಸದಸ್ಯರು ಇದ್ದು, ಸದಸ್ಯರ ಷೇರು ಬಂಡವಾಳ 132.18 ಲಕ್ಷ ಹೊಂದಿದೆ. 14.5 ಕೋಟಿ ರೂ. ವೆಚ್ಚದಲ್ಲಿ ಕಚಗಾನೆಯಲ್ಲಿ ಕಾಫಿ ಸಂಸ್ಕರಣಾ ಘಟಕ, ಗೋದಾಮು, ಅಡಕೆ ಸಂಸ್ಕರಣಾ ಘಟಕ ನಿರ್ಮಿಸಿದೆ. ಕಳೆದ ವರ್ಷ 3 ಲಕ್ಷ ಕ್ವಿಂಟಾಲ್ ಅಡಕೆ ಸಂಸ್ಕರಣೆ ಮಾಡಲಾಗಿದೆ. ಅಡಕೆ, ಕಾಳುಮೆಣಸನ್ನು ಕ್ಯಾಂಪ್ಕೋ ಮೂಲಕ ಮಾರಾಟ ಮಾಡಿ ಗರಿಷ್ಠ ಬೆಲೆ ಪಡೆಯಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಬ್ಯಾಂಕ್ ಸಿಇಒ ಮಹಬಲೇಶ್ವರ, ಉಪಾಧ್ಯಕ್ಷೆ ಆಶಾಲತಾ ಜೈನ್, ನಿರ್ದೇಶಕರಾದ ಅ.ರಾ.ಸತೀಶ್ಚಂದ್ರ, ರವಿಕುಮಾರ್, ಅನಿಲ್ ಗೆವೀನ್, ಎಚ್.ಎಸ್.ಶ್ರೀಪಾಲಯ್ಯ, ರವಿಕುಮಾರ್, ಶಕುಂತಲಾ, ಕೆ.ರಾಜೇಂದ್ರ, ಎಚ್.ಟಿ.ಕೃಷ್ಣಪ್ಪ, ಕೆ.ಎಸ್.ಕೃಷ್ಣಪ್ಪ, ಕೆ.ಕೃಷ್ಣ, ಎನ್ ಎನ್.ಅನಸೂಯಾ ಇದ್ದರು.