65 ಲಕ್ಷ ಟನ್ ಕಬ್ಬು ನುರಿಸುವ ಗುರಿ

8Ndr1
Published on

ನಂದೇಶ್ವರ: ನಿರಾಣಿ ಉದ್ಯಮ ಸಮೂಹವು ರೈತರ ಏಳಿಗೆಗಾಗಿ ಅನೇಕ ಯೋಜನೆ ಹಾಕಿಕೊಂಡಿದೆ. ರೈತರು ನಿರಾಣಿ ಸಂಸ್ಥೆ ಮೇಲೆ ವಿಶ್ವಾಸವಿಟ್ಟು ಹೆಚ್ಚು ಕಬ್ಬು ಪೂರೈಸಿದ್ದಾರೆ ಎಂದು ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಾಣಿ ಉದ್ಯಮ ಸಮೂಹದ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಫೆಬ್ರವರಿ ಮೊದಲ ವಾರದವರೆಗೂ ರೈತರು 12 ಲಕ್ಷ ಟನ್ ಕಬ್ಬು ಪೂರೈಸಿದ್ದಾರೆ. ನಿರಾಣಿ ಉದ್ಯಮದ 12 ಸಕ್ಕರೆ ಕಾರ್ಖಾನೆಗಳಿಂದ 65 ಲಕ್ಷ ಟನ್ ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಿರಾಣಿ ಉದ್ಯಮ ಸಮೂಹದ ಬೆನ್ನೆಲುಬಾಗಿ ರೈತರು ನಿಂತಿರುವುದು ಹೆಮ್ಮೆಯ ಸಂಗತಿ ಎಂದರು.

ರೈತರು ಸಂಗಮೇಶ ನಿರಾಣಿ ಅವರನ್ನು ಸತ್ಕರಿಸಿದರು. ವರ್ಧಮಾನ ಯಲಗುದ್ರಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹಂಚಿನಾಳ, ಶ್ರೀಶೈಲ ಜಕ್ಕಪ್ಪನವರ, ಕಾಕಾಸಾಹೇಬ ರುದ್ರಗೌಡರ, ಸಿದ್ದಪ್ಪ ಹಂಚಿನಾಳ, ಸುರೇಶ ಗಾಣಿಗೇರ, ಶಿವಕುಮಾರ ಪಾಟೀಲ, ಶಿವಾನಂದ ಖನಗೌಡರ, ಮುರುಗೇಶ ಹಂಚಿನಾಳ, ಪ್ರಶಾಂತ ಪಾಟೀಲ, ಮಹಾಂತೇಶ ಹಂಚಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net