65 ಕಾರ್ಪೋರೇಟರ್​ಗಳ ಸುದ್ದಿಗೋಷ್ಠಿ: ಶಿಲ್ಪಾ ನಾಗ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ

rohini sindhuri
Published on

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಶಿಲ್ಪಾ ನಾಗ್ ಪರ ವಹಿಸಿ 65 ಕಾರ್ಪೋರೇಟರ್​​ಗಳು ದನಿ ಎತ್ತಿದ್ದು, ಸುದ್ದಿಗೋಷ್ಠಿ ನಡೆಸಿ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

ಶಿಲ್ಪಾ ನಾಗ್ ಪರ ವಹಿಸಿ ಸುದ್ದಿಗೋಷ್ಠಿ ನಡೆಸಿದ 65 ಕಾರ್ಪೋರೇಟರ್​ಗಳು, ಇದು ಮೈಸೂರು ಮಹಾನಗರ ಪಾಲಿಕೆಯ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ನಾಗ್ ಮೈಸೂರು ಮಹಾನಗರ ಪಾಲಿಕೆಗೆ ಉತ್ತಮ ಅಧಿಕಾರಿಯಾಗಿದ್ದರು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು, ಒಳ್ಳೆಯ ಕೆಲಸ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸಿರುವ ಕಾರ್ಪೋರೇಟರ್​ಗಳು, ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.

ಸಾಮೂಹಿಕವಾಗಿ ಸರ್ವಪಕ್ಷಗಳ ಕಾರ್ಪೋರೇಟರ್‌ಗಳು ಈ ಆಗ್ರಹ ವ್ಯಕ್ತಪಡಿಸಿದ್ದು, ಒಬ್ಬ ಅಧಿಕಾರಿಗೆ ಇಷ್ಟೆಲ್ಲ ಕಿರುಕುಳ ಕೊಡುತ್ತಿರುವುದು ಸರಿಯಲ್ಲ. ಅವರು ಸಿಎಸ್​ಆರ್​ ಫಂಡ್​ ಉಪಯೋಗಿಸಿದ್ದಾರೆ ನಿಜ. ಅವರೂ ಐಎಎಸ್ ಅಧಿಕಾರಿ ತಾನೇ? ಅವರಿಗೇಕೆ ಇಷ್ಟು ಹಿಂಸೆ ಕೊಟ್ಟಿದ್ದೀರಿ ಎಂದು ಈ ಕಾರ್ಪೋರೇಟರ್​​ಗಳು ರೋಹಿಣಿ ಸಿಂಧೂರಿ ಅವರನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net