6314 ವರದಿಗೆ ಕಾಯುತ್ತಿರುವ ಜಿಲ್ಲಾಡಳಿತ

B SHARAT DC Photo
Published on

ಕಲಬುರಗಿ: ಮಂಗಳವಾರ ಒಂದೇ ಒಂದು ಕರೊನಾ ಪ್ರಕರಣ ಪತ್ತೆಯಾಗಿಲ್ಲವೆಂಬ ಶುಭ ಸುದ್ದಿ ಒಂದೆಡೆ ಇದ್ದರೆ 6314 ಪ್ರಕರಣಗಳ ವರದಿ ಇನ್ನೂ ಬರಬೇಕಾಗಿರುವುದರಿಂದ ಕಲಬುರಗಿ ಜಿಲ್ಲೆಗೆ ಆವರಿಸಿರುವ ಭಯ ಇನ್ನೂ ಹೆಚ್ಚಾಗಿದೆ. ಇವುಗಳಲ್ಲಿ ಎಷ್ಟು ಪ್ರಕರಣಗಳು ದೃಢೀಕರಣಗೊಳ್ಳುತ್ತವೆ ಎನ್ನುವುದು ಇನ್ನೂ ಖಚಿತವಾಗಿಲ್ಲದಿರುವುದರಿಂದ ಜಿಲ್ಲಾಡಳಿತಕ್ಕೆ ಇರುವ ತಲೆನೋವು ತಪ್ಪಿಲ್ಲ.
ಸೋಮವಾರ 16 ಪ್ರಕರಣಗಳು ಪತ್ತೆಯಾಗಿದ್ದವು. ಮಂಗಳವಾರ ಯಾವುದೇ ಪ್ರಕರಣಗಳು ಪ್ರಕಟವಾಗಿಲ್ಲ.
ನಗರದ ಖೂಬಾ ಪ್ಲಾಟ್ ನಿವಾಸಿ 45 ವರ್ಷದ ಪುರುಷ (ಪಿ-926) ಕರೊನಾ ಸೋಂಕಿನಿಂದ ಗುಣಮುಖರಾಗಿ ಮಂಗಳವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಎಂ. ಆರ್ ಒಬ್ಬರಿಗೆ ಚಿಕಿತ್ಸೆ ನೀಡಿದ ಪರಿಣಾಮ ಸೋಂಕಿಗೆ ಒಳಗಾಗಿದ್ದ ವೈದ್ಯರು ಬಿಡುಗಡೆಯಾಗಿದ್ದಾರೆ.
ಒಟ್ಟು ದೃಢಪಟ್ಟ ಪ್ರಕರಣಗಳು 157, ಸಾವು ಪ್ರಕರಣ 7, ಗುಣಮುಖರಾದವರ ಸಂಖ್ಯೆ 72 ಮತ್ತು 6314 ಪ್ರಕರಣಗಳ ವರದಿ ಬರುವುದು ಬಾಕಿ ಇದೆ.
ಪ್ರಾಥಮಿಕ ಸಂಪರ್ಕ 1420, ದ್ವಿತೀಯ ಸಂಪರ್ಕ 4679, ವಿದೇಶಿ ಪ್ರಯಾಣಿಕರ ಸಂಖ್ಯೆ 488, ಹೋಂ ಕ್ವಾರಂಟೈನ್ನಲ್ಲಿರುವವರು 505, ಸ್ವಯಂ ವರದಿ ಮಾಡಿಕೊಂಡವರು 1574, 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದವರು 3475, ಐಸೋಲೇಶನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 71, ಒಟ್ಟು ಮಾದರಿ ಸಂಗ್ರಹ 22917, ಸಕ್ರೀಯ ಪ್ರಕರಣಗಳ ಸಂಖ್ಯೆ 78. ನೆಗೆಟಿವ್ ಪ್ರಕರಣಗಳು 16446.
ಈವರಗೆ ಸ್ಥಾಪಿಸಲಾಗಿರುವ ಕಂಟೇನ್ಮೆಂಟ್ ಝೋನ್ಗಳು 37, ಚಾಲನೆಯಲ್ಲಿರುವ ಝೋನ್ಗಳು 19, ಈ ಝೋನ್ಗಳಲ್ಲಿ 52355 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net