ಜಿಲ್ಲೆಯಲ್ಲಿ ಶೇ. 63.46ರಷ್ಟು ಗಣತಿ ಪೂರ್ಣ

Madhu bangarappa
Published on

ಶಿವಮೊಗ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯು ಜಿಲ್ಲೆಯಲ್ಲಿ ಶೇ. 63.46ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೊರಬದಲ್ಲಿ ಶೇ. 77, ಶಿಕಾರಿಪುರದಲ್ಲಿ ಶೇ. 70, ಶಿವಮೊಗ್ಗ ನಗರ ಶೇ. 56, ತೀರ್ಥಹಳ್ಳಿಯಲ್ಲಿ ಶೇ. 57ರಷ್ಟು ಗಣತಿ ಯಶಸ್ವಿ ಆಗಿದ್ದು, ಆರಂಭದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿ ನೇತೃತ್ವದಲ್ಲಿ ಅವುಗಳನ್ನು ಸರಿಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮೀಕ್ಷೆಯು ರಾಜ್ಯದ ಜನರಿಗೆ ನ್ಯಾಯ ಮತ್ತು ಸಮಾನತೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಯಾವುದೇ ಕಾರಣಕ್ಕೂ ಈ ಕೆಲಸ ನಿಲ್ಲಿಸುವುದಿಲ್ಲ ಎಂದರು. ನಿಗದಿತ ಅವಧಿಗಿಂತ ಮುಂಚಿತ ಸಮೀಕ್ಷೆ ಪೂರ್ಣಗೊಳಿಸಿದ 25 ಶಿಕ್ಷಕರಿಗೆ ಅಭಿನಂದಿಸಿದರು.

ದಸರಾ ಯಶಸ್ವಿಗೆ ಸಚಿವರ ಮೆಚ್ಚುಗೆ: ದಸರಾದಲ್ಲಿ ನಟ ಶಿವರಾಜಕುಮಾರ್ ಅವರು ಭಾಗವಹಿಸಿದ್ದನ್ನು ಸ್ಮರಿಸಿದ ಸಚಿವ ಮಧು, ಕೀಮೋಥೆರಪಿ ಚಿಕಿತ್ಸೆ ಮುಗಿಸಿದ ಕೆಲವೇ ದಿನಗಳಲ್ಲಿ ಶಿವಣ್ಣ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಅವರ ಬದ್ಧತೆ ತೋರಿಸುತ್ತದೆ. ದಸರಾ ಯಶಸ್ಸಿಗೆ ಶ್ರಮಿಸಿದ ಕಲಾವಿದರು, ಅಧಿಕಾರಿಗಳು ಮತ್ತು ಜಿಲ್ಲೆಯ ಜನತೆಗೆ ಧನ್ಯವಾದ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net