

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಸ್‌ಪಿವಿಜಿಎಂಸಿ ಟ್ರಸ್ಟ್ 62ನೇ ಪಾರಂಪರಿಕ ಸಂಗೀತೋತ್ಸವ ಕಾರ್ಯಕ್ರಮವನ್ನು ಸೆ.18 ರಿಂದ 30 ರವರೆಗೆ ವಿವಿ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಆಯೋಜಿಸಿದೆ.
11 ದಿನಗಳ ಕಾಲ ನಡೆಯಲಿರುವ ಪಾರಂಪರಿಕ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಹಲವು ಹಿರಿಯ ಕಿರಿಯ ಪ್ರತಿಭಾವಂತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕಲಾರಸಿಕರಿಗೆ ರಸದೌತಣ ನೀಡಲಿದ್ದಾರೆ. ಪ್ರತಿ ದಿನ ಸಂಜೆ 6.45ಕ್ಕೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ.
18 ರಂದು ವಿದ್ವಾನ್ ಮೂರ್ತಿ ಕೊಡಿಯಾಲ(ನಾದಸ್ವರ), ವಿದ್ವಾನ್ ಕೇಶವ ಮೋಹನ್(ವಯೋಲಿನ್), ವಿದ್ವಾನ್ ಎ.ರಾಧೇಶ್(ಮೃದಂಗ), ವಿದ್ವಾನ್ ಶರತ್ ಕೌಶಿಕ್(ಘಟಂ) ಕಾರ್ಯಕ್ರಮ ನೀಡಲಿದ್ದಾರೆ. 19 ರಂದು ವಿದ್ವಾನ್ ಎನ್.ರವಿಕಿರಣ್(ಚಿತ್ರ ವೀಣಾ), ವಿದುಷಿ ಗಾಯತ್ರಿ(ವಯೋಲಿನ್), ವಿದ್ವಾನ್ ಮನ್ನಾರ್‌ಗುಡಿ ಈಶ್ವರನ್(ಮೃದಂಗ), ವಿದ್ವಾನ್ ಜಿ.ಎಸ್.ರಾಮಾನುಜಮ್(ಘಟಂ) ಕಾರ್ಯಕ್ರಮ ನೀಡಲಿದ್ದಾರೆ. 20 ರಂದು ಹೈದರಾಬಾದ್ ಬ್ರದರ್ಸ್ ಖ್ಯಾತಿಯ ವಿದ್ವಾನ್ ಶೇಷಾಚಾರಿ, ವಿದ್ವಾನ್ ರಾಘವಚಾರಿ ‘ದ್ವಂದ್ವ’ ಗಾಯನ ಕಾರ್ಯಕ್ರಮ ನೀಡಲಿದ್ದು, ವಿದ್ವಾನ್ ಎಚ್.ಎನ್.ಭಾಸ್ಕರ್(ವಯೋಲಿನ್), ವಿದ್ವಾನ್ ಮನ್ನಾರ್‌ಗುಡಿ ಈಶ್ವರನ್(ಮೃದಂಗ), ವಿದ್ವಾನ್ ಗಿರಿಧರ ಉಡುಪ(ಘಟಂ) ಸಾಥ್ ನೀಡಲಿದ್ದಾರೆ.
21 ರಂದು ವಿದ್ವಾನ್ ಟಿ.ಎಂ.ಕೃಷ್ಣ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ವಿದ್ವಾನ್ ತ್ರಿವೇಂಡ್ರಂ ಸಂಪತ್(ವಯೋಲಿನ್), ವಿದುಷಿ ರಂಜಿನಿ ವೆಂಕಟೇಶ್ (ಮೃದಂಗ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ಸಹಕಾರ ನೀಡಲಿದ್ದಾರೆ. 22 ರಂದು ವಿದ್ವಾನ್ ಎನ್.ಆರ್.ನೆಮ್ಮಾರ ಕಣ್ಣನ್, ವಿದ್ವಾನ್ ಎನ್.ಆರ್.ಆನಂದ ಬ್ರಹ್ಮ, ವಿದ್ವಾನ್ ಮೈಸೂರು ಎಂ.ನಾಗರಾಜ್ ಅವರಿಂದ ನಾದಸ್ವರ-ವಯೋಲಿನ್ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವಿದ್ವಾನ್ ಅನಂತ ಆರ್.ಕೃಷ್ಣ(ಮೃದಂಗ), ವಿದ್ವಾನ್ ಅಮೃತ್(ಖಂಜಿರ) ಸಾಥ್ ನೀಡಲಿದ್ದಾರೆ.
23 ರಂದು ವಿದ್ವಾನ್ ವಿಷ್ಣುದೇವ್ ನಂಬೂದರಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ವಿದ್ವಾನ್ ಕಾರ್ತಿಕ್ ನಾಗರಾಜ್(ವಯೋಲಿನ್), ವಿದ್ವಾನ್ ರಮಣಮೂರ್ತಿ(ಮೃದಂಗ), ವಿದ್ವಾನ್ ಅಮೃತ್ (ಖಂಜಿರ) ಸಹಕಾರ ನೀಡಲಿದ್ದಾರೆ. 24 ರಂದು ವಿದುಷಿ ಅರುಣಾ ಸಾಯಿರಾಂ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ವಿದುಷಿ ಎಚ್.ಎಂ.ಸ್ಮಿತಾ (ವಯೋಲಿನ್), ವಿದ್ವಾನ್ ಜೆ.ವೈದ್ಯನಾಥನ್(ಮೃದಂಗ), ವಿದ್ವಾನ್ ಗಿರಿಧರ ಉಡುಪ (ಘಟಂ) ಸಾಥ್ ನೀಡಲಿದ್ದಾರೆ.
25 ರಂದು ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯ, ಪಂಡಿತ್ ರಾಕೇಶ್ ಚೌರಾಷಿಯ ಅವರಿಂದ ಕೊಳಲು ಮತ್ತು ಬಾನ್ಸುರಿ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಗಿರಿಧರ ಉಡುಪ(ಘಟಂ), ಪಂಡಿತ್ ಓಜಸ್ (ತಬಲ) ಸಹಕಾರ ನೀಡಲಿದ್ದಾರೆ.
26 ರಂದು ಪಂಡಿತ್ ವೆಂಕಟೇಶ್ ಕುಮಾರ್ ಹಿಂದುಸ್ತಾನಿ ಗಾಯನ ನಡೆಸಿಕೊಡಲಿದ್ದು, ಪಂಡಿತ್ ರವೀಂದ್ರ ಕಾಟೋಟಿ (ಹಾರ್ಮೋನಿಯಂ), ಪಂಡಿತ್ ಕೇಶವ ಜೋಶಿ(ತಬಲ) ಸಹಕಾರ ನೀಡಲಿದ್ದಾರೆ. 27 ರಂದು ಕೆರೆಮನೆ ಶಿವಾನಂದ ಹೆಗ್ಗಡೆ ಮತ್ತು ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. 28 ರಂದು ವಿದ್ವಾನ್ ಮೈಸೂರು ಎಂ.ನಾಗರಾಜ್, ವಿದ್ವಾನ್ ಡಾ.ಮೈಸೂರು ಎಂ.ಮಂಜುನಾಥ್ ಅವರಿಂದ ‘ದ್ವಂದ್ವ ವಯೋಲಿನ್’ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಉಮಯಾಳಪುರಂ ಕೆ.ಸಿವರಾಮನ್(ಮೃದಂಗ), ವಿದ್ವಾನ್ ಗುರುಪ್ರಸನ್ನ(ಖಂಜಿರ) ಸಾಥ್ ನೀಡಲಿದ್ದಾರೆ.
29 ರಂದು ವಿದ್ವಾನ್ ಭರತ್ ಸುಂದರ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಎಚ್.ಎನ್.ಭಾಸ್ಕರ್(ವಯೋಲಿನ್), ವಿದ್ವಾನ್ ಉಮಯಾಳಪುರಂ ಕೆ. ಸಿವರಾಮನ್(ಮೃದಂಗ), ವಿದ್ವಾನ್ ಕಾರ್ತಿಕ್(ಘಟಂ) ಸಹಕಾರ ನೀಡಲಿದ್ದಾರೆ. ಇದಕ್ಕೂ ಮುನ್ನ ಪ್ರತಿ ದಿನ ಸಂಜೆ 5.30 ರಿಂದ 6.40ರ ವರೆಗೆ ನಾನಾ ಕಾರ್ಯಕ್ರಮ ನಡೆಯಲಿವೆ.