ಕೋಟ್ಪಾದಡಿ 626 ಪ್ರಕರಣ ದಾಖಲು

cotpa case
Published on

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಜೆರಾಕ್ಸ್ ಅಂಗಡಿ, ಪೆಟ್ಟಿಗೆ ಅಂಗಡಿ ಮತ್ತು ಬೇಕರಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಕೋಟ್ಪಾದಡಿ 626 ಪ್ರಕರಣ ದಾಖಲು ಮಾಡಿದ್ದಾರೆ.

ಶಾಲಾ ಕಾಲೇಜು ಆವರಣದಿಂದ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಶಿವಮೊಗ್ಗ ಎ ಉಪವಿಭಾಗದಲ್ಲಿ 145, ಶಿವಮೊಗ್ಗ ಬಿ ಉಪವಿಭಾಗದಲ್ಲಿ 142, ಭದ್ರಾವತಿ ಉಪವಿಭಾಗದಲ್ಲಿ 123, ಸಾಗರ ಉಪವಿಭಾಗದಲ್ಲಿ 84, ಶಿಕಾರಿಪುರ ಉಪವಿಭಾಗದಲ್ಲಿ 50 ಮತ್ತು ತೀರ್ಥಹಳ್ಳಿ ಉಪವಿಭಾಗದಲ್ಲಿ 82 ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ಜಿಲ್ಲಾದ್ಯಂತ 26 ಕೋಟ್ಪಾ ಸ್ಥಳ ದಂಡ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net