ಮರುಮೌಲ್ಯಮಾಪನದಲ್ಲಿ 622 ಪಡೆದ ಖುಷಿ

Published on

ಮರುಮೌಲ್ಯಮಾಪನದಲ್ಲಿ 622 ಪಡೆದ ಖುಷಿ

ಮದ್ದೂರು : ಪಟ್ಟಣದ ಶಿವಪುರದ ಪೂರ್ಣ ಪ್ರಜ್ಞಾ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-01 ರಲ್ಲಿ 619 ಪಡೆದಿದ್ದ ವಿದ್ಯಾರ್ಥಿನಿ ಎಸ್.ಖುಷಿ ಮರು ಮೌಲ್ಯಮಾಪನದಲ್ಲಿ ಹಿಂದಿ ವಿಷಯದಲ್ಲಿ 3 ಅಂಕಗಳನ್ನು ಪಡೆಯುವ ಮೂಲಕ 625 ಕ್ಕೆ 622 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಎಸ್.ಖುಷಿ
ಎಸ್.ಖುಷಿ

ಕನ್ನಡ 125, ಇಂಗ್ಲಿಷ್ 98, ಹಿಂದಿ 99, ಗಣಿತ 100, ವಿಜ್ಞಾನ 100 ಹಾಗೂ ಸಮಾಜ 100 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಇವರನ್ನು ಬಿಇಒ ಸಿ.ಎಚ್.ಕಾಳೀರಯ್ಯ, ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net