618 ಕೆ.ಜಿ. ಪ್ಲಾಸ್ಟಿಕ್‌ ಜಪ್ತಿ

mysore
Published on

 ಮೈಸೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡವು ನಗರದ ವಿವಿಧ ವರ್ತಕರ ಅಂಗಡಿಗಳ ಮೇಲೆ ಗುರುವಾರ ದಾಳಿ ಮಾಡಿ ಪರಿಶೀಲನೆ ಮುಂದುವರಿಸಿದೆ.

ಈ ಸಂದರ್ಭದಲ್ಲಿ ನಗರದ ಸಂತೆಪೇಟೆಯ ಧನ್ವಂತರಿ ಟ್ರೇಡಿಂಗ್ ಅಂಗಡಿಯಲ್ಲಿದ್ದ 618 ಕೆ.ಜಿ. ತೂಕದ ಪ್ಲಾಸ್ಟಿಕ್‌ನಿಂದ ತಯಾರಿಸಿದ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಾಲೀಕರಿಗೆ 25 ಸಾವಿರ ರೂ. ವಿಧಿಸಲಾಯಿತು.

ಪಾಲಿಕೆಯ ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ಇನ್‌ಸ್ಪೆಕ್ಟರ್ ಕೃಷ್ಣ, ಬಸವರಾಜು, ಮಂಜು ಕುಮಾರ್, ಅಭಯಾ ತಂಡದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net