ಮಧ್ಯಸ್ಥಗಾರಿಕಾ ಅಭಿಯಾನದಡಿ ೬೧ ಪ್ರಕರಣ ಇತ್ಯರ್ಥ

shubha
Published on

ಮಡಿಕೇರಿ: ಮಧ್ಯಸ್ಥಗಾರಿಕಾ ಅಭಿಯಾನದಡಿ ೬೧ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ನಡೆದ ೯೦ ದಿನಗಳ ವಿಶೇಷ ಮಧ್ಯಸ್ಥಗಾರಿಕಾ ಅಭಿಯಾನ ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ೨೦೨೫ರ ಜು.೧ಕ್ಕೆ ಮಧ್ಯಸ್ಥಿಕೆಗೆ ಅರ್ಹವಾದ ಒಟ್ಟು ಪ್ರಕರಣಗಳು ೧೨,೦೫೪, ಮಧ್ಯಸ್ಥಿಕೆಗೆ ತೆಗೆದುಕೊಂಡ ಪ್ರಕರಣಗಳು ೨೭೭೯, ಮಧ್ಯಸ್ಥಿಕೆಯಲ್ಲಿ ೬೧ ಪ್ರಕರಣಗಳು ಇತ್ಯರ್ಥವಾಗಿದೆ ಎಂದು ಮಾಹಿತಿ ನೀಡಿದರು.

ಒಟ್ಟು ಇತ್ಯರ್ಥವಾದ ಪ್ರಕರಣಗಳಲ್ಲಿ ವೈವಾಹಿಕ ಪ್ರಕರಣಗಳು ೨೩, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ೩, ಚೆಕ್ ಅಮಾನ್ಯ ಪ್ರಕರಣಗಳು ೨೦, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಣಗಳು ೧, ಪಾಲು ವಿಭಾಗ ಪ್ರಕರಣಗಳು(ಸಿವಿಲ್ ವ್ಯಾಜ್ಯ) ೨, ಇತರೆ ಸಿವಿಲ್ ವ್ಯಾಜ್ಯಗಳು ೧೨ ಆಗಿದೆ ಎಂದು ಶುಭ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net