ಮಳವಳ್ಳಿಯಲ್ಲಿ 601 ಮತ ಚಲಾವಣೆ

3 mlv 1
ಮತಗಟ್ಟೆಯ ಬಳಿ ಬಿಜೆಪಿ ಮುಖಂಡರು ಸಾಲುಗಟ್ಟಿ ನಿಂತು ಶಿಕ್ಷಕ ಮತದಾರರ ಮನವೊಲಿಸುತ್ತಿದ್ದರು.
Published on

ಮಳವಳ್ಳಿ : ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ.90ರಷ್ಟು ಮತಗಳು ಚಲಾವಣೆಯಾಗಿವೆ. ತಾಲೂಕಿನಲ್ಲಿ ಒಟ್ಟು 671 ಶಿಕ್ಷಕರ ಮತಗಳಿದ್ದು, ಈ ಪೈಕಿ 601 ಮತ ಚಲಾವಣೆಯಾಗುವ ಮೂಲಕ ಶೇ.90ರಷ್ಟು ಮತದಾನವಾಗಿದೆ. ಈ ಪೈಕಿ 189 ಮಹಿಳೆಯರು ಮತ್ತು 412 ಪುರುಷ ಶಿಕ್ಷಕರು ಮತ ಚಲಾಯಿಸಿದ್ದಾರೆ. ಮತಗಟ್ಟೆ ಪ್ರವೇಶಿಸುವ ಮುಖ್ಯದ್ವಾರದ ಬಳಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹಾಗೂ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಮತ್ತು ಬಿಎಸ್‌ಪಿ ಅಭ್ಯರ್ಥಿ ಹಾರ ಮಹೇಶ್ ಪರವಾಗಿ ಬೆಂಬಲಿಗರು ಮತದಾರನ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಶಾಸಕ ನರೇಂದ್ರಸ್ವಾಮಿ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಮ್ಮ ಬೆಂಬಲಿಗರೊಡನೆ ಮತಗಟ್ಟೆಯ ಬಳಿ ಕುಳಿತು ಶಿಕ್ಷಕರಲ್ಲಿ ಮತ ಯಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net