

ನಿಪ್ಪಾಣಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈಗ ಮತ್ತೆ 21 ಕೋಟಿ ರೂ. ಮಂಜೂರಾಗಿದ್ದು, 600 ಮನೆಗಳು ಸಿದ್ಧವಾಗಿದ್ದು ಅಂತಿಮ ಹಂತದಲ್ಲಿದೆ. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ದಸರಾ ಹಬ್ಬದವರೆಗೆ ಫಲಾನುಭವಿಗಳಿಗೆ ಹಸ್ತಾಂತರಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 133 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಮಾದರಿಯ 2052 ಮನೆ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದ ಅವರು, 6 ಲಕ್ಷ ಲೀಟರ್ ನೀರಿನ ಟ್ಯಾಂಕ್ ಸಿದ್ಧಪಡಿಸಿ ಪೈಪ್‌ಲೈನ್ ಅಳವಡಿಸಲಾಗುವುದು. ಉತ್ತಮ ಗುಣಮಟ್ಟದೊಂದಿಗೆ ಶೀಘ್ರದಲ್ಲಿ ಪೂರ್ಣಗೊಳಿಸುಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಷ್ಟು ಬೇಗನೆ ಮನೆ ನಿರ್ಮಿಸಿ, ಫಲಾನುಭವಿಗಳಿಗೆ ಸೂರು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ, ವಿನಯ, ಪೌರಾಯುಕ್ತ ದೀಪಕ ಹರದಿ, ನಗರಸಭೆ ಸದಸ್ಯ ರಾಜೇಂದ್ರ ಗುಂದೇಶಾ, ಸಂತೋಷ ಸಾಂಗವಕರ, ಸುಜಾತಾ ಕದಮ, ಆಶಾ ಟವಳೆ, ದತ್ತಾತ್ರೇಯ ಜೋತ್ರೆ, ರವಿ ಕದಮ, ಪ್ರಣವ ಮಾನವಿ, ಮಹೇಶ ಸೂರ್ಯವಂಶಿ, ಸೂರಜ ಖವರೆ, ಪ್ರಶಾಂತ ಕೇಸ್ತೆ, ಪ್ರಸಾದ ಔಂಧಕರ ಇತರರು ಇದ್ದರು.