ಚಿತ್ರಗಳಲ್ಲಿ ಅರಳಿದ ಅರಣ್ಯನಾಶದ ಪರಿಣಾಮ

art
Published on

ಹುಬ್ಬಳ್ಳಿ: ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಕಲಾದೇವಿ-ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರದ ವಿವಿಧ ಶಾಲೆಗಳಿಂದ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರಣ್ಯ ನಾಶದಿಂದಾಗುವ ಪರಿಣಾಮಗಳು ಚಿತ್ರದಲ್ಲಿ ಮೂಡಿಬಂದವು. ಹುಬ್ಬಳ್ಳಿ ಉಪಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಧಾರವಾಡ (ಪಶ್ಚಿಮ) ಮತ್ತು ಪ್ರಾದೇಶಿಕ ಸಾರಿಗೆ ಧಾರವಾಡ (ಪೂರ್ವ) ಇವರ ಜಂಟಿ ಸಂಯೋಗದೊಂದಿಗೆ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಅರಣ್ಯ ನಾಶದಿಂದ ಉಂಟಾಗುವ ಪರಿಣಾಮಗಳು, ಐದರಿಂದ ಏಳನೇ ತರಗತಿ ಮಕ್ಕಳು ವಾಯು ಮಾಲಿನ್ಯಕ್ಕೆ ಕಾರಣ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮ, ಎಂಟರಿಂದ 10ನೇ ತರಗತಿ ವಿದ್ಯಾರ್ಥಿಗಳು ಪರಿಸರ ಮಾಲಿನ್ಯದಿಂದ ಋತುಮಾನಗಳ ಮೇಲೆ ಉಂಟಾಗುತ್ತಿರುವ ಬದಲಾವಣೆ ಹಾಗೂ ಪರಿಣಾಮಗಳು ಕುರಿತು ಚಿತ್ರ ಬಿಡಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಹೆಚ್ಚುವರಿ ಸಾರಿಗೆ ಆಯುಕ್ತ ಾರುತಿ ಸಾಮ್ರಾಣಿ ಚಾಲನೆ ನೀಡಿ ಮಾತನಾಡಿ, ವಾಯು ಮಾಲಿನ್ಯಕ್ಕೆ ಕಾರಣಗಳು ಮತ್ತು ಅದರಿಂದಾಗುವ ದುಷ್ಪರಿಣಾಮಗಳು, ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಸಿದರು.

ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಭೀಮನಗೌಡ ಪಾಟೇಲ, ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಕೆ. ದಾಮೋದರ, ಸಂಜಯ ಕೊಟಬಾಗಿ, ಡಾ. ಪಿ. ಜಿ. ತೇವರಿ, ಪ್ರಾಧ್ಯಾಪಕರಾದ ಡಾ. ವಿರೇಶ ಬಾಳೆಕಾಯಿ, ಎಸ್.ಡಿ.ಬೆಲ್ಲದ, ವಿನಾಯಕ ನಾಯ್ಕ, ನಾಗರಾಜ ಶೆಲಿಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net