

ಬೀದರ್: ಇಲ್ಲಿಯ ಗೋಲೆಖಾನಾದ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಬಿರದಲ್ಲಿ 110 ಆಟೊ ಚಾಲಕರ ಉಚಿತ ನೇತ್ರ ತಪಾಸಣೆ ನಡೆಯಿತು. ದೃಷ್ಟಿದೋಷ ಕಂಡುಬಂದ 60 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಲಾಯಿತು. ಡಾ. ವೀರೇಂದ್ರ ಪಾಟೀಲ್, ಇಮ್ಯಾನುವೆಲ್ ಡಿ., ಸುನೀಲ್ ಎಂ.ಕೆ., ಪ್ರದೀಪ್ ಇತರರುಳ್ಳ ತಂಡವು ನೇತ್ರ ತಪಾಸಣೆ ನಡೆಸಿತು. ಈ ವೇಳೆ ಮಾತನಾಡಿದ ಆಸ್ಪತ್ರೆ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್, ಆಸ್ಪತ್ರೆಯು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಪ್ರಯತ್ನಿಸುತ್ತಿದೆ. ಬಡವರ ಅನುಕೂಲಕ್ಕಾಗಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಿರಂತರ ಆಯೋಜಿಸುತ್ತಿದೆ ಎಂದು ಹೇಳಿದರು. ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಅಧಿಕಾರಿ ಡಾ.ಮಹೇಶ ಬಿರಾದಾರ, ಆಸ್ಪತ್ರೆ ಆಡಳಿತಾಧಿಕಾರಿ ಫಿಲೋಮನ್ರಾಜ್ ಪ್ರಸಾದ್ ಮಾತನಾಡಿದರು. ಪುಟ್ಟರಾಜ ಬಲ್ಲೂರಕರ್ ನಿರೂಪಣೆ ಮಾಡಿದರು. ಸುದೇಶ ಪ್ರೇಮ ವಂದಿಸಿದರು.