60 ಕಿಲೋ ಏಕ ಬಳಕೆ ಪ್ಲಾಸ್ಟಿಕ್ ವಶ

15 NRD-3
ನರಗುಂದದ ವಿವಿಧ ಅಂಗಡಿಗಳ ಮೇಲೆ ಶನಿವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಸಂಗಮೇಶ ಬ್ಯಾಳಿ, ಸಿದ್ದು ಕಿಲಾರಿ, ಪ್ರೀತಿ ಗವಿಮಠ, ಈಶ್ವರ ನಾಯ್ಕರ, ಮಾರುತಿ ದೊಡಮನಿ, ಇತರರಿದ್ದರು.
Published on

ನರಗುಂದ: ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿ 60 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.

ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಲೋಟ, ಚಮಚ, ಊಟದ ತಟ್ಟೆ, ಕ್ಯಾರಿಬ್ಯಾಗ್, ಹಾಳೆ, ಇತರ ವಸ್ತುಗಳ ಮಾರಾಟ ಮಾಡುತ್ತಿದ್ದ ಮಾರುಕಟ್ಟೆ ಪ್ರದೇಶದಲ್ಲಿನ ವಿವಿಧ ಬಟ್ಟೆ ಅಂಗಡಿ, ಬೇಕರಿ, ಅಡಕೆ, ಕಿರಾಣಿ ಸೇರಿದಂತೆ 12ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿ 60 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 11 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಯಿತು.

ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ, ವಿ.ಎಸ್. ನಾಯ್ಕರ, ದ್ವಿತೀಯ ದರ್ಜೆ ಸಹಾಯಕ ಸಿದ್ದು ಕಿಲಾರಿ, ಮಹಾಂತೇಶ ಚಲವಾದಿ, ಆನಂದ ದಿಬ್ಬದಮನಿ, ಮಹಾದೇವಪ್ಪ ಜೋಗಣ್ಣವರ, ಮಾರುತಿ ದೊಡಮನಿ, ರಾಚಪ್ಪ ಕೆರೂರ, ಆನಂದ ತಡಸಿ, ವಿಜಯ ಚೆಲುವಣ್ಣವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net