ಬೆಳಗಾವಿ ಡಯಟ್ ನಲ್ಲಿ ಸಸಿ ನೆಡುವ ಕಾರ್ಯಕ್ರಮ

IMG-20230705-WA0033.jpg
Published on

ಬೆಳಗಾವಿ : ತಾಲೂಕಿನ ಮಣ್ಣೂರ್ ಗ್ರಾಮದಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಸಾಮಾಜಿಕ ಹಾಗೂ ವಲಯ ಅರಣ್ಯ ಇಲಾಖೆ ಮತ್ತು ಡಯಟ್ ರವರ ಸಹಯೋಗದಲ್ಲಿ 60 ಸಸಿಗಳನ್ನು ನೆಡಲಾಯಿತು.‌

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀ ಪುರುಷೋತ್ತಮ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸರಿತಾ ಬಸವಂತ ನಾಯಕ್, ಮಧು ಚೌಗುಲೆ, ಸಂಗೀತ ಸಾಮ್ರೆಕರ್, ಪಿಡಿಒ ಶಿವಾಜಿ ಮಡಿವಾಳರ, ಡಯಟ್ ಪ್ರಾಚಾರ್ಯ ಎಸ್. ಡಿ ಗಾಂಜಿ ಹಾಗೂ ಡಯಟ್ ಉಪನ್ಯಾಸಕರು ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net