ಇಂಡಿಯಲ್ಲಿ 60 ಮಿಮೀ ಮಳೆ

rain
Published on

ಇಂಡಿ: ಪಟ್ಟಣ ಮತ್ತು ಸುತ್ತಮುತ್ತ ಆ. 6 ರಂದು 60 ಮಿಮೀ ಮಳೆಯಾಗಿದ್ದಲ್ಲದೆ, ತಾಲೂಕಿನಲ್ಲಿ 52 ಮಿಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ. ಇಂಡಿ ಪಟ್ಟಣ 60 ಮಿ.ಮೀ., ಝಳಕಿ 58 ಮಿ.ಮೀ, ಹೊರ್ತಿ 74 ಮಿ.ಮೀ, ನಾದ 39.2 ಮತ್ತು ಅಗರಖೇಡ 28.1 ಮಿ.ಮೀ. ಮಳೆಯಾಗಿದೆ. ಗುರುವಾರ ಬೆಳಗ್ಗೆಯೂ ಭಾರಿ ಮಳೆಯಾಗಿದ್ದು, ಅಹಿರಸಂಗ ಮತ್ತು ಅಗರಖೇಡ ರಸ್ತೆಗಳಲ್ಲಿ ಜನರಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net