60ಅಡಿ ರಸ್ತೆ ವಿಸ್ತರಣೆ ಮಾಡಿ

12 ALVANID 03
ಅಳವಂಡಿ ಗ್ರಾಪಂ ಕಾರ್ಯದರ್ಶಿ ಬಸವರಾಜಗೆ ವ್ಯಾಪಾರಸ್ಥರು ಮನವಿ ಸಲ್ಲಿಸಿದರು, ಪ್ರಮುಖರಾದ ಮಂಜುನಾಥಗೌಡ ಪಾಟೀಲ, ಮಹಾಂತೇಶ, ಮಹೇಶ ಮಾಳೆಕೊಪ್ಪ, ಶಿವಕುಮಾರ ಎಲಿಗಾರ, ನಿಂಗಪ್ಪ ಮೈನಳ್ಳಿ, ದೇವಮ್ಮ, ವಿರೂಪಾಕ್ಷಪ್ಪ ಹಕ್ಕಂಡಿ ಇತರರಿದ್ದರು.
Published on

ಅಳವಂಡಿ: ಗ್ರಾಮದ ಹಿರೇಹಳ್ಳದಿಂದ ಸಿದ್ದೇಶ್ವರ ನಗರದ ಕ್ರಾಸ್‌ವರೆಗೆ ಕೊಪ್ಪಳ-ಮುಂಡರಗಿ ರಸ್ತೆ ವಿಸ್ತರಣೆ ಮಾಡುವುದರಿಂದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ರಸ್ತೆಯನ್ನು 60ಅಡಿಗೆ ಮಾತ್ರ ವಿಸ್ತರಣೆ ಮಾಡಬೇಕೆಂದು ವ್ಯಾಪಾರಿಗಳು ಗ್ರಾಪಂ ಕಾರ್ಯದರ್ಶಿ ಬಸವರಾಜಗೆ ಸೋಮವಾರ ಮನವಿ ಸಲ್ಲಿಸಿದರು.

ಗ್ರಾಮದ ಸರಹದ್ದಿನಲ್ಲಿ 80 ಅಡಿ ರಸ್ತೆ ವಿಸ್ತರಣೆ ಮಾಡಲು ಗ್ರಾಪಂ ಒಪ್ಪಿಗೆ ಸೂಚಿಸಿದ್ದು, ಇದರನ್ವಯ ರಸ್ತೆ ಬದಿ ವ್ಯಾಪಾರಿಗಳಿಗೆ 80ಅಡಿ ಒಳಗಡೆ ಇರುವ ಅಂಗಡಿ ತೆರವುಗೊಳಿಸಲು ನೋಟಿಸ್ ನೀಡಿದೆ. ಇದರಿಂದ ವ್ಯಾಪಾರಿಗಳಿಗೆ ತೊಂದರೆಯಾಗಲಿದ್ದು, ಹಲವಾರು ವರ್ಷಗಳಿಂದ ತೆರಿಗೆ ಸಹ ಕಟ್ಟಲಾಗಿದೆ. ಅಂಗಡಿಗಳನ್ನ ತೆರವುಗೊಳಿಸಿದರೆ ಲಕ್ಷಾಂತರ ರೂ. ಖರ್ಚು ಮಾಡಿ ಶೆಡ್ ಹಾಕಿದ್ದು ನಷ್ಟವಾಗಲಿದೆ. ಕಾರಣ ರಸ್ತೆ ವಿಸ್ತರಣೆಯನ್ನು 60ಅಡಿಗೆ ಸೀಮಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಪರಶುರಾಮ ಬನ್ನಿಕೊಪ್ಪ, ಪರಮೇಶ ಆರೇರ, ಶೇಖಸಾಬ್, ಮಾರುತಿ, ದಿಲೀಪ ಮಠದ, ಮಂಜುನಾಥ, ಗವಿ ಮಾಳೆಕೊಪ್ಪ, ಮುರ್ತುಜಾಸಾಬ್, ಸಲೀಂ ಪಟೇಲ, ಖಾಜಾವಲಿ ನಾದ್ಾ, ರಾಮರಡ್ಡಿ ನಾಗರಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net