ಕೆಎಎಸ್ ಪರೀಕ್ಷೆಗೆ 60 ದಿನಗಳ ತರಬೇತಿ

Published on

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ವೃತ್ತಿ ಕೇಂದ್ರ, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರ ಹಾಗೂ ನಮೋ ಪ್ರಮತಿ ಸಂಸ್ಥೆಯಿಂದ ಕರ್ನಾಟಕ ಲೋಕಸೇವಾ ಆಯೋಗ ನಡೆಯುವ ಕೆಎಎಸ್ ಪರೀಕ್ಷೆಗೆ 60 ದಿನಗಳ ತರಬೇತಿ ನೀಡಲಾಗುವುದು.
ನಗರ ಹಾಗೂ ಗ್ರಾಮೀಣ ಪ್ರದೇಶದವರಿಗೆ ಪ್ರತ್ಯೇಕ ತಂಡದಲ್ಲಿ ತರಬೇತಿ ನೀಡಲಿದ್ದು, ಮೇ 1ರಿಂದ ತರಬೇತಿ ಆರಂಭವಾಗಲಿದೆ. ಈಗಾಗಲೇ ನೋಂದಾಯಿಸಿಕೊಂಡಿರುವವರು ಹಾಗೂ ಇತರ ಆಸಕ್ತರು ವಿಶ್ವವಿದ್ಯಾನಿಲಯ ವೃತ್ತಿ ಕೇಂದ್ರ, ಜಯಲಕ್ಷ್ಮೀ ವಿಲಾಸ ಹಿಂಭಾಗ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬೆಳಗ್ಗೆ 10ಕ್ಕೆ ಹಾಜರಾಗಬಹುದು. ಮಾಹಿತಿಗೆ ಮೊ.9731139407, 8217724985 ಅಥವಾ 9900629393 ಸಂಪರ್ಕಿಸಲು ತರಬೇತಿ ಶಿಬಿರದ ಸಂಚಾಲಕ ಎನ್.ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net