

ಚಿತ್ರದುರ್ಗ:ಹತ್ತಿ ಖರೀದಿದಾರು ಹತ್ತಿ ಪೇಮೆಂಟ್‌ನ್ನು ಸಮಯಕ್ಕೆ ಸರಿಯಾಗಿ ನೀಡದೆ ಇರುವುದರಿಂದ,ದಲ್ಲಾಲರು ರೈತರಿಗೆ ಹಣ ಪಾವತಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ.6ರಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹತ್ತಿ ಮಾರುಕಟ್ಟೆ ನಡೆಸದಿರಲು ಇಲ್ಲಿಯ ದಲ್ಲಾಲರ ಸಂಘ ತೀರ್ಮಾನಿಸಿದೆ. ಆದ್ದರಿಂದ ರೈತರು ಹತ್ತಿಯನ್ನು ಮಾರುಕಟ್ಟೆ ತರದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ‌್ಯದರ್ಶಿ ಬಿ.ಎಲ್.ಕೃಷ್ಣಪ್ಪ ತಿಳಿಸಿದ್ದಾರೆ.