6 ರಂದು ನವ ಸಾಕ್ಷರರ ಪರೀಕ್ಷೆ

Speech by M.Nasiruddin photo-1--05
Published on

ಚಿತ್ರದುರ್ಗ: ಸಂಪೂರ್ಣ ಸಾಕ್ಷರತಾ ಕಾರ‌್ಯಕ್ರಮದಡಿ ಕಲಿತ ನವಸಾಕ್ಷರರಿಗೆ ಆ.6ರಂದು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ನಿಗದಿ ಪರೀಕ್ಷೆ ನಡೆಯಲಿದೆ ಎ ಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್‌ನಲ್ಲಿ ಸೋಮವಾರ ನಡೆದ ಪರೀಕ್ಷೆ ಪೂರ್ವ ಸಿದ್ಧತಾ ಸಭೆ ಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಪರೀಕ್ಷೆ ನಡೆಯಲಿದ್ದು,ಇದಕ್ಕಾಗಿ ಅಗತ್ಯ ಸಿದ್ಧತೆಗೆ ಅಧಿಕಾ ರಿಗಳಿಗೆ ಸೂಚಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ,ಜಿಲ್ಲೆಯಲ್ಲಿ 10926 ನವ ಸಾಕ್ಷರರು ಪರೀಕ್ಷೆ ಬರೆಯಲಿದ್ದಾರೆ. ಚಳ್ಳಕೆರೆ ತಾಲೂ ಕು 1918,ಚಿತ್ರದುರ್ಗ-1918,ಹಿರಿಯೂರು-2221,ಹೊಳಲ್ಕೆರೆ-1757,ಹೊಸದುರ್ಗ-2205 ಹಾಗೂ ಮೊಳಕಾಲ್ಮೂರು ತಾಲೂಕಲ್ಲಿ 907 ನವಸಾಕ್ಷರರು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾರ್ಥಿಗಳ ಶೇ.100 ಹಾಜರಾತಿಗೆ ಅಧಿಕಾರಿಗಳು ಶ್ರಮಿಸ ಬೇಕೆಂದರು.

ಡಯಟ್‌ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಸ್.ವೆಂಕಟೇಶಪ್ಪ,ಸಹ ನೋಡಲ್ ಅಧಿಕಾರಿ ಆರ್.ನಾಗರಾಜು,ಉಪನ್ಯಾಸಕ ಎಸ್. ಬಸವ ರಾಜು,ಬಿಆರ್‌ಸಿಗಳಾದ ಸುರೇಂದ್ರನಾಥ್,ಸಂಪತ್‌ಕುಮಾರ್,ತಿಪ್ಪೇಸ್ವಾಮಿ,ಶ್ರೀನಿವಾಸ್,ತಿಪ್ಪೇರುದ್ರಪ್ಪ,ತಿಪ್ಪೇಸ್ವಾಮಿ,ಕಚೇರಿ ನಿರ್ವಾಹಕರಾದ ಸಿ.ಎಂ.ಮಹೇಂದ್ರ,ಶಿವಕುಮಾರ್,ಎಚ್.ಕೆ.ಶ್ರೀನಿವಾಸ,ತಾಂತ್ರಿಕ ಸಹಾಯಕ ಮಂಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net