

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸ್ವಲ್ಪ ಕಡಿಮೆಯಾಗಿದೆ. ಜಲಾವತಗೊಂಡಿರುವ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕೆಳ ಹಂತದ 6 ಬ್ರಿಜ್ಡ್ ಕಂ ಬಾಂದಾರಗಳು ಯಥಾಸ್ಥಿತಿಯಲ್ಲಿವೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದ್ದಾರೆ. ರಾಜ್ಯದ ಗಡಿಯಂಚಿನಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ 57,000 ಕ್ಯೂಸೆಕ್ ಹಾಗೂ ದೂಧಗಂಗಾ ನದಿಯಿಂದ 18,010 ಕ್ಯೂಸೆಕ್ ನೀರು ಸೇರುವ ಕಲ್ಲೋಳ ಬಳಿ 75,010 ನೀರು ಒಳಹರಿವು ಇದೆ.ಸುಮಾರು 1.5 ಲಕ್ಷ ಕ್ಯೂಸೆಕ್‌ಕ್ಕಿಂತಲೂ ಹೆಚ್ಚಿನ ನೀರು ಬಂದಾಗ ಮಾತ್ರ ಪ್ರವಾಹದ ಮುನ್ಸೂಚನೆ ಹೆಚ್ಚಾಗುತ್ತದೆ. ಹೀಗಾಗಿ ಸದ್ಯಕ್ಕೆ ಯವುದೇ ರೀತಿ ಪ್ರವಾಹದ ಮುನ್ಸೂಚನೆ ಇಲ್ಲ. ವೇದಗಂಗಾ ಮತ್ತು ದೂಧಗಂಗಾ ಉಪನದಿಗಳು ಮೈದುಂಬಿ ಹರಿಯುತ್ತಿದ್ದು, ಕಷ್ಣಾ ನದಿ ನೀರು ಹೊರಗೆ ಬಂದಿದ್ದು, ನದಿ ತೀರದ ಜನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.