6 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

6 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Published on

ಹಾಸನ: ನರ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಆರು ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ನಗರದ ಡಾ. ಮಂಜುನಾಥ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಅಮೋಘ್‌ಗೌಡ ಅವರು ಹೇಳಿದರು.
ಕಳೆದ ಜು.30ರಂದು ಆರು ತಿಂಗಳ ಮಗುವಿಗೆ ಬೆನ್ನಿನಲ್ಲಿ ಕೂದಲು ಬೆಳೆದಿವೆ ಎಂದು ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ದಾಖಲಿಸಲಾಗಿತ್ತು. ನಂತರ ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ಖಟ್ಝಜಿಠಿ ಇಟ್ಟ ಚ್ಝ್ಛಟ್ಟಞಠಿಜಿಟ್ಞ ಕಾಯಿಲೆ ಇರುವುದು ಪತ್ತೆಯಾಯಿತು. ಜು.31 ರಂದು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆನ್ನು ಭಾಗದ ಒಂದೇ ಜಾಗದಲ್ಲಿ ಎರಡು ನರಗಳು ಇರುವುದೇ ಕಾಯಿಲೆಗೆ ಕಾರಣವಾಗಿತ್ತು. ಅದರಿಂದ ಮಗುವಿನ ಕಾಲುಗಳು ನಿಶಕ್ತವಾಗಿದ್ದವು. ವೈದ್ಯರು ಸಮಯ ಪ್ರಜ್ಞೆಯಿಂದ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ನರ್ವ್ ಮಾನಿಟರಿಂಗ್ ಟೆಕ್ನಾಲಜಿ ಮತ್ತು ಮೈಕ್ರೋ ಸ್ಕೋಪಿ ಸಹಾಯದೊಂದಿಗೆ ಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ತಾಯಿ ಗರ್ಭಿಣಿಯಾದ ಸಂದರ್ಭದಲ್ಲಿ ಐರನ್ ಅಂಶಗಳು ಕಡಿಮೆ ಇರುವುದೇ ಕಾಯಿಲೆಗೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕೆಂದು ಕೋರಿದರು.
ಆರು ತಿಂಗಳ ಮಗುವಿಗೆ ಸತತ ಎಂಟು ಗಂಟೆಗಳ ಕಾಲ ಅರವಳಿಕೆ ಚುಚ್ಚುಮದ್ದು ನೀಡಿ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಹೊಟ್ಟೆ ಭಾರದಲ್ಲೇ ಮಗುವನ್ನು ಮಲಗಿಸಬೇಕು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ 50 ರಿಂದ 60 ಎಂಎಲ್ ರಕ್ತಸ್ರಾವ ವಾಗುತ್ತದೆ. ಆದ್ದರಿಂದ ಅತ್ಯಂತ ಜಾಗರೂಕವಾಗಿ ಚಿಕಿತ್ಸೆ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಅರವಳಿಕೆ ಶಸ್ತ್ರಚಿಕಿತ್ಸಕ ಡಾ.ಬಿ.ಎಂ.ಸುಹಾಸ್, ಮಕ್ಕಳ ತಜ್ಞ ಡಾ.ಪ್ರೀತಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net