ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

dead
Published on

ಸುಳ್ಯ: ಪೈಚಾರು ಬಳಿಯ ದೊಡ್ಡೇರಿ ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಆಂಧ್ರ ಮೂಲದ ಕುಟುಂಬಸ್ಥರು ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು, ಅಲ್ಲೇ ಪರಿಸರದಲ್ಲಿ ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು.

ಬುಧವಾರ ಮಧ್ಯಾಹ್ನ ನದಿಗೆ ಸ್ನಾನಕ್ಕೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಹೋಗಿದ್ದರು. ಈ ಸಂದರ್ಭ ಬಾಲಕ ಕುಪ್ಪರಾ ಕಾಣೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಅಲ್ಲೇ ಪಕ್ಕದಲ್ಲಿ ಮೃತದೇಹ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net