6 ತಿಂಗಳವರೆಗೆ ತಾಯಿ ಹಾಲು ಕುಡಿಸಿ

12 LNG 03
ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ನ್ಯುಮೋನಿಯಾ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಉದ್ಘಾಟಿಸಿದರು. ವೈದ್ಯರಾದ ಬಸವರಾಜ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ಶುಶ್ರೂಷಾಧಿಕಾರಿ ಶ್ರೀ ದೇವಿ, ರವಿ ಮಡ್ಡಿಕರ್, ಸತ್ತರ್ ಪಾಷಾ, ಸರೀತಾ, ಸಂಜೀವ ಕುಮಾರ ಇತರರಿದ್ದರು.
Published on

ಲಿಂಗಸುಗೂರು: ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ನ್ಯುಮೋನಿಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿ, ನ್ಯುಮೋನಿಯಾ ಕಾಯಿಲೆ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡು ಬರುತ್ತದೆ. ಶೀತ ನೆಗಡಿ, ಅಲ್ಪ ಪ್ರಮಾಣದ ಜ್ವರ ಕಂಡು ಬಂದಾಗ ನಿರ್ಲಕ್ಷ್ಯ ತೋರಿದರೆ ತೀವ್ರ ಉಸಿರಾಟದ ತೊಂದರೆಯಾಗಲಿದೆ. ಮಗುವಿಗೆ ತೊಂದರೆ ಉಂಟಾಗುವ ಮೊದಲೇ ಚಿಕಿತ್ಸೆ ಕೊಡಿಸಬೇಕು. ನವಜಾತ ಶಿಶು ಆರೈಕೆ ಮಾಡುವ ವಿಧಾನ, ಆರು ತಿಂಗಳವರೆಗೆ ಕೇವಲ ತಾಯಿ ಹಾಲು ಮಾತ್ರ ಕೊಡಬೇಕು ಮತ್ತು ಸರಿಯಾದ ಸಮಯಕ್ಕೆ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net