

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ 2023ನೇ ಸಾಲಿನ ಪರೀಕ್ಷೆಯಲ್ಲಿ ಇಲ್ಲಿನ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು 6 ರ‍್ಯಾಂಕ್ ಪಡೆದಿದ್ದಾರೆ.
ಬಿ.ಕಾಂ ವಿದ್ಯಾರ್ಥಿಗಳಾದ ಸೃಷ್ಟಿ ದುಂಡಗೆ ಶೇ. 95.07 ಅಂಕದೊAದಿಗೆ ದ್ವಿತೀಯ ರ‍್ಯಾಂಕ್, ಅತಿಯಾ ಸಿರಖಾಜಿ ಶೇ. 94.84 ಅಂಕದೊAದಿಗೆ 6ನೇ ರ‍್ಯಾಂಕ್, ನಂದಿನಿ ಕುರಿ ಶೇ. 94.72 ಅಂಕದೊAದಿಗೆ 7ನೇ ರ‍್ಯಾಂಕ್, ವಾಣಿಶ್ರೀ ದಡ್ಡೇನವರ ಶೇ. 94.65 ಅಂಕದೊAದಿಗೆ 8ನೇ ರ‍್ಯಾಂಕ್ ಮತ್ತು ದುರಗೇಶ ಪ್ರಭು ಶೇ. 94.47 ಅಂಕದೊAದಿಗೆ 10ನೇ ರ‍್ಯಾಂಕ್ ಪಡೆದಿದ್ದಾರೆ. ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಎಸ್.ಕೆ. ಗುಬ್ಬಿ ವಿಜ್ಞಾನ ಪದವಿ ಕಾಲೇಜಿನ ಪದ್ಮಿನಿ ಅಳಗವಾಡಿ ಶೇ. 94.93 ಅಂಕದೊAದಿಗೆ 4ನೇ ರ‍್ಯಾಂಕ್ ಪಡೆದಿದ್ದಾಳೆ.
ಸಾಧಕ ವಿದ್ಯಾರ್ಥಿಗಳನ್ನು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯ ಡಾ. ನಾಗಚಂದ್ರ ಅಭಿನಂದಿಸಿದ್ದಾರೆ.