ಸನ್ನಡತೆ ಅಡಿ 6 ಕೈದಿಗಳ ಬಿಡುಗಡೆ

Dharwad Central Jail4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸನ್ನಡತೆ ಆಧಾರದ ಮೇಲೆ ನಗರದ ಕೇಂದ್ರ ಕಾರಾಗೃಹದಲ್ಲಿದ್ದ 6 ಕೈದಿಗಳನ್ನು ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಸನ್ನಡತೆ ಅಡಿ 10 ಕೈದಿಗಳ ಬಿಡುಗಡೆಗೆ ಜಿಲ್ಲಾ ಸಮಿತಿ ಸರ್ಕಾರಕ್ಕೆ ಶಿ-Áರಸು ಮಾಡಿತ್ತು. ಈ ಪೈಕಿ ನಾಲ್ವರ ಬಿಡುಗಡೆ ರದ್ದಾಗಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಗುರುನಾಥ ಬಸಪ್ಪ ನರೇಂದ್ರ, ಹುಬ್ಬಳ್ಳಿ ಗೌಸಿಯಾನಗರದ ಜಾಫರಸಾಬ ಮೈನುದ್ದೀನ್ ಮುಲ್ಲಾ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅವೇರಹಳ್ಳಿಯ ಸೋಮಣ್ಣ ಬಸಣ್ಣ, ಹಾಸನ ಜಿಲ್ಲೆ ಆಲೂರು ತಾಲೂಕಿನ ದೇವರಪುರದ ರಂಗಸ್ವಾಮಿ ನಿಂಗರಾಜ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಮುಳಕೇರಿಯ ಫಕ್ಕೀರಪ್ಪ ಶಿವಪ್ಪ ಕಬನೂರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲು ಕಸಬಾ ಗ್ರಾಮದ ರವೀಶ ನಾಯಕ ಜೈಲಿನಿಂದ ಬಿಡುಗಡೆಯಾದವರು.
ಇವರೆಲ್ಲರೂ ವಿವಿಧ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಎಲ್ಲರೂ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕನಿಷ್ಠ 14 ಜೈಲುಶಿಕ್ಷೆ ಅನುಭವಿಸಿದ್ದರು. ಸಜಾ ಅವಧಿಯಲ್ಲಿ ಸನ್ನಡತೆ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಬಿಡುಗಡೆಗೆ ಶಿಫಾರಸು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net