ನೀರಿನಲ್ಲಿ ಕೊಚ್ಚಿ ಹೋದ 6 ಮಂದಿ

Published on

ಒಂದೇ ಕುಟುಂಬಸ್ಥರ ದುರಂತ, ಇಬ್ಬರ ಸಾವು, ನಾಲ್ವರಿಗೆ ಶೋಧ

ಕುಣಿಗಲ್​: ಮಾಕೋರ್ನಹಳ್ಳಿ ಜಲಾಶಯದ ಕೋಡಿ ದಂಡೆಯಲ್ಲಿ ನೀರಿನಲ್ಲಿ ಆಟವಾಗುತ್ತಿದ್ದ ಒಂದೇ ಕುಟುಂಬದ 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಅಪಾಯದಿಂದ ಪಾರಾದ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಮಾಗಡಿಪಾಳ್ಯದ ಸಾದಿಯಾ(28), ಅರ್ಬೀನ್​(20) ಮೃತದೇಹ ಪತ್ತೆಯಾಗಿದ್ದು, ಗಾಯಾಳು ನವಾಜ್​ (32)ನನ್ನು ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿರುವ ತಬಸಮ್​ (46), ಶಬಾನ(44), ಮಹಿಬ್​(1), ನಿಪ್ರಾ(4) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇವರೆಲ್ಲ ತುಮಕೂರಿನ ಬಿಜಿ ಪಾಳ್ಯದವರು ಎನ್ನಲಾಗಿದೆ.

ರಜೆ ಮಜ ತಂದ ಆಪತ್ತುದಸರೆ ರಜೆ ಹಿನ್ನೆಲೆ ತುಮಕೂರು ಬಿ.ಜಿ.ಪಾಳ್ಯದ ತಬಸಮ್​ ಕುಟುಂಬ ಸದಸ್ಯರೊಂದಿಗೆ ಕುಣಿಗಲ್​ ತಾಲೂಕಿನ ಮಾಗಡಿಪಾಳ್ಯದ ಮಗಳು ಸಾಜಿಯಾ ಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಊಟದ ಬಳಿಕ ಅಳಿಯ ಮಗಳ ಜತೆಯಾಗಿ ಮಾಕೋರ್ನಹಳ್ಳಿ ಜಲಾಶಯ ವೀಣೆಗೆ ತೆರಳಿದ್ದರು. ಈ ವೇಳೆ ಕೋಡಿಯ ನೀರು (ಶಿಂಷಾ ನದಿ) ಹರಿಯುತ್ತಿರುವ ಸ್ಥಳದಲ್ಲಿ ಕುಟುಂಬದ ಸದಸ್ಯರೆಲ್ಲರೂ ನೀರಿನಲ್ಲಿ ಅಟವಾಡುತ್ತಿದ್ದಾಗ ಜಲಾಶಯದ "ಬೇಬಿ ಸೈಾನ್​' (ಸ್ವಯಂ ಚಾಲಿತ ಸೈಾನ್​) ಜಲಾಶಯದಿಂದ ಹೆಚ್ಚುವರಿ ನೀರನ್ನ ಏಕಾಏಕಿ ಹೊರಬಿಡಲಾಗಿತ್ತು. ಪರಿಣಾಮ ಪ್ರವಾಹದ ರಭಸ ಹೆಚ್ಚಿದ್ದು, ನೀರಿನಲ್ಲಿ ಆಡುತ್ತಿದ್ದವರೆಲ್ಲ್ಲ ಕೊಚ್ಚಿಹೋಗಿದ್ದಾರೆ.ವಿಷಯ ತಿಳಿದ ತಣ ಅಮತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋದವರ ಪತ್ತೆಗೆ ಶೋಧ ಕಾರ್ಯ ನಡೆಸಿದರು. ಇಬ್ಬರ ಶವ ಸಿಕ್ಕಿದ್ದು ಇನ್ನೂ ನಾಲ್ಕು ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ. ರಾತ್ರಿಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಎಎಸ್ಪಿ ಗೋಪಾಲ್​, ಡಿವೆಎಸ್​ಪಿ ಓಂಪ್ರಕಾಶ್​, ಸಿಪಿಐ ನವೀನ್​ ಗೌಡ, ಮಾದ್ಯಾನಾಯಕ್​ ಭೇಟಿ ನೀಡಿ ಶೋಧಕಾರ್ಯದ ವೇಳೆ ಮಾರ್ಗದರ್ಶನ ನೀಡಿದರು.ತುಮಕೂರು ಪೊಲೀಸರ ಕಾರ್ಯಚರಣೆ!:ಅವಡ ಸಂಭವಿಸಿರುವ ಸ್ಥಳ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್​ ಠಾಣೆ ವ್ಯಾಪ್ತಿಗೆ ಬರಲಿದೆ. ಆದರೆ ಬೆಳ್ಳೂರು ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಾರ್ಯಾಚರಣೆಗೆ ಹಿಂದೇಟು ಹಾಕಿದಾಗ, ಕುಣಿಗಲ್​ ಪೊಲೀಸರು ಮಾನವೀಯ ದೃಷ್ಟಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮೃತದೇಹವನ್ನು ಬೆಳ್ಳೂರು ಪೊಲೀಸರಿಗೆ ಹಸ್ತಾಂತರಿಸಿ ಮರಣೋತ್ತರ ಪರೀೆ ನಡೆಸಲು ಎಸ್ಪಿ ಕೆ.ವಿ.ಅಶೋಕ್​ ಸೂಚಿಸಿದ್ದಾರೆ.ದುರಂತ ಇದೇ ಮೊದಲಲ್ಲ 2021ರಲ್ಲಿ ಇದೇ ಜಾಗದಲ್ಲಿ ನೀರಾಟದಲ್ಲಿ ತೊಡಗಿದ್ದ 5 ಮಂದಿ ಜಲಸಮಾಧಿ ಆಗಿದ್ದರು. ಈಗ ಮತ್ತೆ ಇದೇ ಜಾಗದಲ್ಲಿ 6 ಮಂದಿ ಕೊಚ್ಚಿ ಹೋಗಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಮಾಕೋರ್ನಹಳ್ಳಿ ಜಲಾಶಯದ ಸ್ವಯಂಚಾಲಿತ ಸೈನ್​ ಗೇಟ್​ ಮೂಲಕ ಏಕಾಏಕಿ ನೀರು ಹೊರಹಾಕಿದ್ದರಿಂದ ಶಿಂಷಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿತ್ತು. ಇದರ ಸುಳಿವಿರದೆ ದಡದ ಬಳಿ ಆಡುತ್ತಿದ್ದ ಒಂದೇ ಕುಟುಂಬದ 7 ಮಂದಿ ಕೊಚ್ಚಿ ಹೋಗಿದ್ದಾರೆ. ಈಗ ಇಬ್ಬರ ಮೃತದೇಹ ಪತ್ತೆಯಾಗಿದ್ದು ಇಬ್ಬರು ಮಕ್ಕಳು ಸೇರಿ ಮಹಿಳೆಯರಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆೆ > ಕೆ.ವಿ.ಅಶೋಕ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net