ನಗರದ ಬಲ್ಲಾಳ್‌ಬಾಗ್ ಶ್ರೀದೇವಿ ಕಾಲೇಜು ರಸ್ತೆ ಬಳಿ ಮಾದಕ ವಸ್ತು ಸೇವನೆ ಆರೋಪದ ಮೇಲೆ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಎರ್ನಾಕುಳಂ ನಿವಾಸಿ ಅಮಲ್ ಥಾಮಸ್ (23), ಕಣ್ಣೂರು ಮುತಿಯಂಗ ನಿವಾಸಿ ಇಸ್ರತುಲ್ ಇಬಾದ್ (21), ಎರ್ನಾಕುಳಂ ಸಿರಿಯನ್ ಚರ್ಚ್ ರಸ್ತೆ ನಿವಾಸಿ ಮಾರ್ಟಿನ್ ಸ್ಟೀವಿನ್ ಪೈವಾ (20) ಪ್ರಕರಣದ ಆರೋಪಿಗಳು. ಆರೋಪಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.