6 ತಿಂಗಳು ರೌಡಿಶೀಟರ್ ಗಡಿಪಾರು

deportation
Published on

ಹುಬ್ಬಳ್ಳಿ: ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಧಾರವಾಡದ ಲಕ್ಷ್ಮೀಸಿಂಗನಕೇರಿ ನಿವಾಸಿ ತಿರುಪತಿ ತಿಮ್ಮಣ್ಣ ಹಿರೇಮನಿ (30) ಎಂಬಾತನನ್ನು, 6 ತಿಂಗಳ ಅವಧಿಗೆ ಕಲಬುರ್ಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಗುಂಪು ಕಟ್ಟಿಕೊಂಡು ಮುಗ್ಧ ಜನರಿಗೆ ಹೆದರಿಸುವುದು, ರೌಡಿತನದಿಂದ ವಿವಾದಿತ ಆಸ್ತಿಗಳಲ್ಲಿ ಮಧ್ಯಪ್ರವೇಶಿಸಿ ಅನಕ್ಷರಸ್ಥರ ಮೇಲೆ ಹಲ್ಲೆ ಮಾಡಿ ಆಸ್ತಿ ಕಬಳಿಸುವುದು, ಸಾರ್ವಜನಿಕ ಶಾಂತಿ ಭಂಗ ಮಾಡುವ ಪ್ರವೃತ್ತಿ ಹೊಂದಿದ್ದ ಈತನ ಮೇಲೆ ಈಗಾಗಲೇ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ರೌಡಿಶೀಟರ್ ಆಗಿದ್ದ ಈತ, ಕೆಲ ಪ್ರಕರಣಗಳಲ್ಲಿ ಬಿಡುಗಡೆ ಹೊಂದಿದ ಧೈರ್ಯದ ಮೇಲೆ ಮತ್ತೆ ಕಾನೂನು ಬಾಹಿರ ಚಟುವಟಿಕೆ ಮುಂದುವರಿಸಿದ್ದ ತಿರುಪತಿ ಮೇಲೆ ತೀವ್ರ ನಿಗಾ ಇಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net