ತುಮಕೂರು: ಗಡಿನಾಡು ಪಾವಗಡ ತಾಲೂಕಿನ ಕ್ಯಾತಗಾನಚೆರಲು ಗ್ರಾಮದ ರೈತನ ಮಗ ರಾಮು ತುಮಕೂರು ವಿವಿ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದು, 6 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ಬುಧವಾರ ತುಮಕೂರು ವಿವಿ 17ನೇ ಟಿಕೋತ್ಸವದಲ್ಲಿ ರೈತ ಕುಟುಂಬದ ಕುಡಿ ರಾಮು ರಾಜ್ಯಪಾಲ ಥಾವರಚೆಂದ್ ಗೆಹಲೋತ್ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಪಡೆದರು. ಕ್ಯಾತಗಾನಚೆರಲು ಗ್ರಾಮದ ಮುತ್ಯಾಲಪ್ಪ ಮತ್ತು ನರಸಮ್ಮ ದಂಪತಿ ಪುತ್ರ ರಾಮು, ಶಿಕ್ಷಕನಾಗುವ ಕನಸು ಕಾಣುತ್ತಿದ್ದು, ಬಿ.ಇಡಿ ವ್ಯಾಸಂಗ ಮಾಡುತ್ತಿದ್ದಾರೆ. ಎಂಎ ಓದುವಾಗಲೇ ಕೆಎಸ್.ಇಟಿ(ಕೆಸೆಟ್) ಹಾಗೂ
ಎನ್ಇಟಿ ಪರೀೆಗಳಲ್ಲಿಯೂ ಅರ್ಹತೆ ಪಡೆದಿದ್ದು, ನೆಚ್ಚಿನ ಉಪನ್ಯಾಸಕ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವ ಬಯಕೆ ಹೊಂದಿದ್ದಾರೆ. ರೈತ ಕುಟುಂಬದ ಕುಡಿ ರಾಮು ಚಿನ್ನದ ಪದಕ ಸ್ವೀಕಾರ ಮಾಡುವಾಗ ವೇದಿಕೆಯ ಮುಂಭಾಗದಲ್ಲಿಯೇ ಕುಳಿತಿದ್ದ ಆತನ ತಂದೆ, ತಾಯಿ ಕಣ್ಣಾಲಿಗಳು
ತೇವವಾಗಿದ್ದವು. ರಾಜ್ಯಪಾಲರಿಂದ ಪದಕ ಸ್ವೀಕರಿಸಿದ ನಂತರ ನೇರವಾಗಿ ತಂದೆ&ತಾಯಿ ಬಳಿಗೆ ಬಂದ ರಾಮು ಆಶೀರ್ವಾದ ಪಡೆದರು.
ಗ್ರಾಮೀಣ ಭಾಗದಿಂದ ಬಂದಿದ್ದರೂ ಚಿನ್ನದ ಪದಕ ಪಡೆಯಲು ಸಾಧ್ಯವಾಗಿರುವುದು ಖುಷಿ ನೀಡಿದೆ. ಗುರುಗಳ ಮಾರ್ಗದರ್ಶನ, ತಂದೆ&ತಾಯಿ ಆಶೀರ್ವಾದದಿಂದ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ. ಬಿ.ಇಡಿ ಪದವಿ ಕೂಡ ಪೂರ್ಣಗೊಳಿಸಿದ ನಂತರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಬಯಕೆಯಿಂದ ಅರ್ಹತಾ ಪರೀೆಗಳನ್ನು ತೇರ್ಗಡೆಯಾಗಿದ್ದೇನೆ. ರಾಮು ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿ
ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ರಾಮು, ಪರಿಶಿಷ್ಟ ಪಂಗಡ ವಿದ್ಯಾರ್ಥಿಗೆ ನೀಡಲಾಗುವ ಮೊದಲ ರ್ಯಾಂಕ್ ಸೇರಿದಂತೆ ಒಟ್ಟು ಆರು ಚಿನ್ನದ ಪದಕ ಮುಡಿಗೇರಿಸಿಕೊಂಡರು. ರೋನಿತಾ ಎಸ್.ಜೈನ್ ಬಿ.ಕಾಂ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದು ಮೂರು ಚಿನ್ನದ ಪದಕದ ಜತೆಗೆ ನಗದು ಬಹುಮಾನ ಕೂಡ ಪಡೆದರು. ಜಿ.ಎಲ್.ಲತಾ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದು ಮೊದಲ ರ್ಯಾಂಕ್ ಪಡೆದು ಮೂರು ಚಿನ್ನದ ಪದಕ ಪಡೆದರು, ಎಂ.ಕಾಂ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಎನ್.ವಿಜಯಲಕ್ಷಿ$್ಮ ಮೂರು ಚಿನ್ನದ ಪದಕ, ಸ್ನಾತಕೋತ್ತರ ವಿಭಾಗ ಪರಿಸರ ವಿಜ್ಞಾನ ಮೊದಲ ರ್ಯಾಂಕ್ ಪಡೆದ ಎ.ರಮ್ಯಶ್ರೀ ಮೂರು ಚಿನ್ನದ ಪದಕ ಪಡೆದರು. ಕೆ.ಪಿ.ಪವಿತ್ರಾ ಸ್ನಾತಕೋತ್ತರ ಗಣಿತ ವಿಷಯದಲ್ಲಿ ಮೊದಲ ರ್ಯಾಂಕ್ ಪಡೆದು ಮೂರು ಚಿನ್ನದ ಪದಕ ಪಡೆದರು. ಎಂಎ ಇತಿಹಾಸ ವಿಭಾಗದಲ್ಲಿ ಎಸ್.ನಾಗೇಂದ್ರ, ಅರ್ಥಶಾಸ್ತ್ರ ವಿಭಾಗದಲ್ಲಿ ಮಮತಾರಾಣಿ, ಸಮಾಜಕಾರ್ಯ ವಿಭಾಗದಲ್ಲಿ ಎಚ್.ಬಿ.ಧನಲಕ್ಷಿ$್ಮ, ಬಿಎ ಪದವಿಯಲ್ಲಿ ಭವಾನಿವರ್ಮ, ಬಿಎಸ್ಸಿ ಪದವಿಯಲ್ಲಿ ಟಿ.ಜೆ.ಅಮಿತ್ಗೌಡ, ಎಂಎಸ್ಸಿಯಲ್ಲಿ ಗುರುನಾಥ್ ಅಣ್ಣಪ್ಪ ಮೊದಲ ರ್ಯಾಂಕ್ ಪಡೆದು ಚಿನ್ನದ ಪದಕಗಳಿಗೆ ಕೊರೊಳೊಡ್ಡಿದರು.
ತುಮಕೂರು ತಾಲೂಕು ಕಾಳೇನಹಳ್ಳಿಯ ಚೇತನಾ ಆರ್.ಪ್ರಸಾದ್ ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ 3ನೇ ರ್ಯಾಂಕ್ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಆರ್.ರೇಣುಕಾಪ್ರಸಾದ್, ಮೈತ್ರಾ ದಂಪತಿ ಪುತ್ರಿ ಚೇತನಾ ಪ್ರಾಥಮಿಕ, ಪ್ರೌಢಶಾಲೆಯನ್ನು ಸರ್ಕಾರಿ ಶಾಲೆಯಲ್ಲಿ ಓದಿದ್ದು ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಸಾಧನೆಗೈದಿದ್ದಾರೆ.